ಕಥೆ, ಕಾವ್ಯ, ಅನುವಾದ, ಪ್ರಕಾರದಲ್ಲಿ ಸಾಹಿತ್ಯಿಕವಾಗಿ ಗುರುತಿಸಿಕೊಂಡು ಈಗಾಗಲೇ ಹತ್ತಾರು ಕೃತಿ ಪ್ರಕಟಿಸಿ ಹೆಸರು ಮಾಡಿರುವ ಲೇಖಕಿ ನೂರ್ ಜಹಾನ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಪರಿಚಿತ ಹೆಸರು, ಇವರು ಜೀವನದ ಆರಂಭದಲ್ಲಿಯೇ ಬದುಕಿನ ಬಹು ಭಾಗ್ಯ ಹಾಗೂ ಸಂತೋಷವನ್ನು ವಿಧಿಯ ಕೈವಾಡದಿಂದ ಕಳೆದುಕೊಂಡವರು, ಆದರೂ ಎದೆಗುಂದದೇ ಬದುಕು ಬರಹದಲ್ಲಿ ತೊಡಗಿಕೊಂಡಿರುವುದು ಅಭಿನಂದನೀಯ, ಈ ಹಿರಿಯ ಪ್ರತಿಭಾವಂತ ಲೇಖಕಿಯ ಕವನಗಳು ಓದುತ್ತಾ ಹೋದರೆ ಪ್ರೇಮ, ಪ್ರೀತಿ, ಅನುರಾಗ, ಬದುಕಿನ ಜೀವ ದ್ರವ್ಯಗಳೇ ಕಳೆದುಕೊಂಡ ಹತಾಶೆ, ನೋವು, ವಿರಹ, ಆಲಾಪನೆ, ಹೆಪ್ಪುಗಟ್ಟಿ ಕಾವ್ಯರೂಪು ಹೊಂದಿದ್ದು ಓದುಗನ ಕಣ್ಣಂಚಿನಲ್ಲಿ ನೀರು ಹನಿಸುತ್ತವೆ, ಬೆಂದವರ ನೋವು ಬೇಯದವರೇನು ಬಲ್ಲರು, ಎಂಬಂತೆ ಸತ್ಯದ ಅನಾವರಣ ಕಾಣುತ್ತದೆ, ಮಮ್ಮಲ ಮರುಗಿಸಿತ್ತವೆ, ಓದುಗನು ವಿಷಾದದಲ್ಲಿ ಮುಳುಗಿ ಹೋಗುತ್ತಾನೆ. ಮಾಗಿದ ಅಪಾರ ಜೀವನಾನುಭವ, ಬದುಕಿ ಎದುರಾದ ದಖಡಿಗಳು, ವಯಕ್ತಿಕ ಹಾಗೂ ಸುತ್ತಮುತ್ತಲಿನ ನೋವುಗಳು, ಸಾಮಾಜಿಕ, ರಾಜಕೀಯ, ಬದುಕಿನ ದೈನಂದಿನ ಒಳಸುಳಿಗಳು, ಪ್ರಕೃತಿ, ಭೂಕಂಪ, ಸಾವು, ನೋವು, ಬಡತನ, ಶೋಷಣೆ, ದುಡಿಯುವ ಮಹಿಳೆಯರ ಅತಂತ್ರ ಸ್ಥತಿ, ಲೈಂಗಿಕ ಕಿರುಕುಳಗಳು, ಕೌಟುಂಬಿಕ ಹಿಂಸೆ, ಜನರ ಬಂಧು ಬಾಂಧವರ ಸಣ್ಣತನ, ಹಿರಿಮೆ, ಹೀಗೆ ಧರ್ಮ, ದೇವರು, ಅನ್ನದಾನಿ, ಇಂತಹ ಎಲ್ಲಾ ವಿಷಯ ವಸ್ತುಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಕಾವ್ಯವಾಗಿಸಲು ಯತ್ನಿಸಿ ಬಹುಪಾಲು ಯಶಸ್ಸು ಕಂಡಿದ್ದಾರೆ, ಕೆಲವು ಕಡೆ ಅವರೊಳಗಿನ ಕಥೆಗಾರ ಕಾವ್ಯದ ಮೇಲೂ ಪ್ರಭಾವಿಸಿರುವುದು ಕಂಡು ಬರುತ್ತದೆ. ಎನ್ನುತ್ತಾರೆ ಸಿದ್ದರಾಮ ಹೊನ್ಕಲ್.
©2024 Book Brahma Private Limited.