ಎಳ್ಳು ಬೆಲ್ಲ ಸಂತೋಷ್ ಬಿದರಗಡ್ಡೆ ಅವರ ಕವನ ಸಂಕಲನವಾಗಿದೆ.ಯುವ ಮನಸ್ತುಗಳಿಗೆ ಸದಾ ಸ್ಪೂರ್ತಿಯಾಗಿ ಅವರ ಹೃದಯದ ಕಣ್ಣ ಕವಿತೆಗಳಾಗಿ ಅಭಿವ್ಯಕ್ತಿ ಹೊಂದಿ ; ಕಣ್ಣಿಗೆ ಕಾಣದ್ದನ್ನು ಕಿವಿಗೆ ಕೇಳಿದ್ದನ್ನು ಅವರ ಹೃದಯದ ಮಿಡಿತದ ಕವಿತೆಯ ಪದಗಳಾಗಿ ; ಮನದ ಕಲ್ಪನೆಯಾಗಿ: ಹೃದಯ ತಟ್ಟಿವೆ. ಭಾವನೆಗಳ ಲಿಪಿಯು ಅನನ್ಯವಾಗಿ ಶಬ್ದಗಳ ಸಮ್ಮಿಲನದ ತೇರನ್ನು ಎಳೆದು ತಂದಿವೆ. ಯಾಂತ್ರಿಕ ಯುಗದಲ್ಲೂ ಚಿಂತನೆ, ಭಾವನೆ ಹಸಿರಾಗಿವೆ. ಪ್ರಕೃತಿ, ನೆಲಜಲ, ನಾಡುನುಡಿ, ತಾಯಿ- ವಾತ್ಸಲ್ಯ, ಪ್ರೀತಿಪ್ರೇಮಗಳೊಂದಿಗೆ ಪ್ರಸ್ತುತವಾದ ಹಲವು ಹತ್ತು ವಿಚಾರಗಳಿವೆ. ಈ ಎಲ್ಲವನ್ನು ಪುಟ್ಟ ಕವನ ಸಂಕಲನ 'ಸಂತೋಷ' ತಂದಿದೆ. ಶಿಕ್ಷಕ ಸಂತೋಷ ಬಿದರಗಡ್ಡೆ ತಮ್ಮ ಕವನಸಂಕಲನದ ಮೂಲಕ ಕವಿತ್ವದ ಕಣ್ಣನ್ನು ತೆರೆದು 'ಹೊಂಬೆಳಕ'ನ್ನು 'ಎಳ್ಳುಬೆಲ್ಲ'ದ ಮೂಲಕ ನೀಡಿದ್ದಾರೆ. ಯು.ಎನ್. ಸಂಗನಾಳಮುತ್ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.