ಮಾಧವ ಕೌಶಿಕ್ ಕವಿತೆಗಳು ಸುಮಾ ಕಾಟ್ಕರ್ ಅವರ ಅನುವಾದಿತ ಕವನಸಂಕಲನವಾಗಿದೆ . ನಿಸರ್ಗ ಪ್ರೀತಿಯುಳ್ಳ ಡ. ಮಾಧವ ಕೌಶಿಕ್ ಅವರ ಕವಿತೆಗಳು ಮನುಷ್ಯತ್ವವನ್ನು ಪ್ರತಿಪಾದಿಸುತ್ತವೆ. ಸಹಜ ಸುಂದರವಾಗಿರುವ ಈ ಕವಿತೆಗಳನ್ನು ಅಷ್ಟೇ ಸಹಜ ಶೈಲಿಯಲ್ಲಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಆದಾನ ಸಾಹಿತ್ಯದ ಪ್ರಧಾನವು ಸಾಂಸ್ಕೃತಿಕವಾಗಿ ತುಂಬಾ ಮಹತ್ವವಾದುದು; ಅದು ಜನರನ್ನು ಜನರಿಗೆ ಜೋಡಿಸುವ ಸೃಜನಶೀಲ ಕ್ರಿಯೆ. ಇದನ್ನು ಸಾಧ್ಯಮಾಡಿ ತೋರಿಸಿದ ಸುಮಾ ಕಾಟ್ಕರ್ ಅವರನ್ನು ನಾನು ಆಭಿನಂದಿಸುತ್ತೇನೆ ಎಂದು ಸತೀಶ್ ಕುಲಕರ್ಣಿ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.