ಜುಮುಕಿ ಹೂ ಸುರೇಶ್ ಎನ್ ಮಲ್ಲಿಗೆ ಮನೆ ಅವರ ಕವನ ಸಂಕಲವಾಗಿದೆ. ಈ ಕವನಸಂಕಲನ ವೈವಿಧ್ಯಮಯ ಕವಿತೆಗಳ ಗುಚ್ಛವಾಗಿದೆ. ಸರಳ ಕವಿತೆಗಳೂ ಇವೆ. ಗಹನವಾದವೂ ಇವೆ. ಶಬ್ದಗಳಿಂದ ಸಿಂಗಾರಗೊಂಡು ಕಂಗೊಳಿಸುವ ಕವಿತೆಗಳೂ ಇವೆ, ಹೆಚ್ಚಿನ ಆಡಂಬರವಿಲ್ಲದೇ ಸಹಜವಾಗಿ ತಮ್ಮ ಮೂಲಸೌಂರ‍್ಯವನ್ನು ತೋರುವ ಕವಿತೆಗಳೂ ಇವೆ. ಆದರೆ ಎಲ್ಲ ಕವಿತೆಗಳೂ ಓದುಗನ ಆಳಕ್ಕಿಳಿಯುವುದು ಖಚಿತ. ಸುರೇಶರು ಈ ಸಂಕಲನವನ್ನು “ಮಲೆನಾಡ ಮಲೆಮಗಳ ಕಿವಿಯೋಲೆ” ಎಂದಿದ್ದಾರೆ. ನಾನು ಇದು ಅವರ ಅಂತರಂಗದ ಓಲೆಯೂ (ಪತ್ರ) ಮತ್ತು ಜುಮುಕಿ ಹೂವೂ..ಹೌದು ಎನ್ನುತ್ತೇನೆ. ಸೂಕ್ಷ್ಮ, ಸಂವೇದನಾಶೀಲ ಶಿಕ್ಷಕರಾದ- ಮಲ್ಲಿಗೆ ಮನಸ್ಸಿನ- ಸುರೇಶ ಮಲ್ಲಿಗೆಮನೆಯವರು ಇನ್ನಷ್ಟು ಪ್ರಕಾರಗಳಲ್ಲಿ ಬರೆಯಲಿ, ಸಾಹಿತ್ಯ ಸೃಷ್ಟಿ ಅಕ್ಷಯವಾಗಲಿ ಎಂದು ಆಶಿಸುತ್ತೇನೆ ಎಂದು ಅಜಿತ್ ಹರೀಶಿ , ಸೊರಬ ಅವರು ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.