ಮುಸ್ಸಂಜೆ ಮಾತು ಎಚ್. ಎಸ್. ವೆಂಕಟೇಶಮೂರ್ತಿ ಅವರ ಕವನ ಸಂಕಲನವಾಗಿದೆ. ಕವಿ ಖಾಸಗೀತನವನ್ನು ಮುರಿದು ಸಾರ್ವತ್ರಿಕ ಆಗುವ ಕ್ಷಣ ಯಾವುದು? ಮುಸ್ಸಂಜೆ ಹೊತ್ತು ಸಂಕಲನದ ಬಹುತೇಕ ಕವಿತೆಗಳು ಎಚ್ ಎಸ್ ವೆಂಕಟೇಶಮೂರ್ತಿ ಅವರು ಕಳೆದ ಐದಾರು ವರುಷಗಳಲ್ಲಿ ಅನುಭವಿಸಿದ ಕಷ್ಟ-ಸುಖ, ಯಾತನೆ, ನೋವು, ಕತ್ತಲೆ-ಬೆಳಕು, ಭರವಸೆ- ವಾರ್ಧಿಕ್ಯಗಳ ಮೊತ್ತ. ಅವರ ಕವಿ ಮನಸ್ಸು ಕಂಡುದೆಲ್ಲವನ್ನೂ ಕವಿತೆಯಾಗಿ ಮಾಡುತ್ತಾ ಹೋಗುತ್ತದೆ. ಆಶ್ಚರ್ಯವೆಂದರೆ ಅವರ ಬದುಕಿನ ಒಳ ವಿವರಗಳು ಗೊತ್ತಿಲ್ಲದವರಿಗೂ ಈ ಕವಿತೆಗಳು ಅನ್ಯಾಯ ಮಾಡುವುದಿಲ್ಲ.
©2024 Book Brahma Private Limited.