ಪ್ರೇಮವೀಣೆ ಕವನ ಸಂಕಲನ 50 ಕವಿತೆಗಳನ್ನು ಒಳಗೊಂಡಿದೆ. ಇದರಲ್ಲಿ ಓದುಗರಿಗೆ ಜಾತಿಭೂತ, ಧಾರ್ಷ್ಟ್ಯ ಮನ, ಶ್ರೀಸಾಮಾನ್ಯರು, ದಾಸ್ಯ, ಪರಿವರ್ತನೆ,ಕರ್ಮಫಲ, ಆರ್ತನಾದ, ಸಮಾನತೆ ರಾಯಭಾರಿ,ಗ್ರಹಣ ಹೀಗೆ ನಾನಾ ಪ್ರಮುಖ ಕವಿತೆಗಳು ಮನಸ್ಸಿಗೆ ಕಾಡುತ್ತವೆ. ಇವುಗಳು ಸಮಾಜದಲ್ಲಿ ಕಂಡು ಬರುವ ಸಾಮಾಜಿಕ ಅಸಮಾನತೆ, ವರ್ಣ ವ್ಯವಸ್ಥೆ, ಲಿಂಗ ತಾರತಮ್ಯ, ಶೋಷಣೆಯನ್ನು ಕವಿ ಕಠೋರವಾದ ಪದಗಳ ಮೂಲಕವೇ ಖಂಡಿಸಿದ್ದಾರೆ. "ಕೋಮುವಾದ ನಾಮದೊಳು ಕೆಸರ ಎರೆಚಾಟ ಜಗಶುದ್ಧ ಮಾಡ ಹೊರಟ ಬೂಟಾಟಿಕೆಯ ಹೋರಾಟ ಜಾಗೃತಿಯ ಮೂಡಲಿ ಜನಮಾನಸದಲಿ ತೊಲಗಲಿ ಜಾತಿಭೂತ ಪ್ರಜ್ಞಾವಂತ ಸಮಾಜದಲಿ, ಜಾತಿಭೂತ ಎಂಬ ಕವಿತೆಯ ಈ ಸಾಲುಗಳು ಪ್ರಸ್ತುತ ನಡೆಯುತ್ತಿರುವ ಕೋಮುಗಲಭೆ, ಜಾತಿ ವ್ಯವಸ್ಥೆ ಸೇರಿದಂತೆ ಧರ್ಮಾಂಧತೆಯ ಪ್ರತಿಬಿಂಬವಾಗಿ ನಿಲ್ಲುತ್ತವೆ. ಹಾಗೆಯೆ ‘ಗೋಸುಂಬೆಯ ಬಣ್ಣ ಬಣ್ಣದ ರೂಪಗಳು ಅಕ್ಷಿಯೊಳು ಹೊಕ್ಕು ಮಂತ್ರಸಾನಿಯ ದುಷ್ಕೃತ್ಯಗಳು.... ಎಂಬ ಸಾಲುಗಳೂ ಲೋಕದೆದುರು ಹಸಿಹಸಿ ಸುಳ್ಳುಗಳ ತೆರೆತೆರೆಯಾಗಿ ಬಿಚ್ಚುಡುತಿವೆ’ ಹಾಗೆಯೇ ಈ ಕವನ ಹಲವಾರು ಚಿಂತನೆಗಳನ್ನು ಮನಸ್ಸಿಗೆ ಹರಿಬಿಡುತ್ತದೆ.
©2025 Book Brahma Private Limited.