ಈ ಕೃತಿಯು ಕೊರೋನಾ ಕುರಿತಾದ ಕವನವಾಗಿದೆ. ಕೊರೋನಾದಿಂದ ಜಾಗತಿಕವಾಗಿ ಜನರ ಜೀವನ ಶೈಲಿಯಲ್ಲಿ ಮತ್ತು ಅನೇಕ ಕ್ಷೇತ್ರಗಳಲ್ಲಿ ಬದಲಾವಣೆ ಅಥವ ಕ್ರಾಂತಿಯಾಯಿತು, ಜನರು ಜೀವ-ಜೀವನಕ್ಕಾಗಿ ಹೋರಾಡಿದರು. ಈ ಕ್ರಾಂತಿಯ ಕುರಿತಾದ ಸ್ಪಂದನೆ ಅಭಿವ್ಯಕ್ತವಾಗಿದೆ. ಕೊರೋನಾದ ರಚನೆ, ಮೂಲ ಗೊತ್ತಿಲ್ಲದೇ, ಜಗತ್ತಿಗೆ ಹಬ್ಬಿದ ರೀತಿ, ಅದರಿಂದಾದ ಪರಿಣಾಮಗಳು, ಮನುಜರು ಹೋರಾಡಿದ ರೀತಿ-ನೀತಿಗಳನ್ನು ಕವನದ ಮೂಲಕ ಸಂಕೀರ್ಣವಾಗಿ ಚಿತ್ರಿಸಲಾಗಿದೆ.
...ಬಂದೇ ಬಿಟ್ಟಿತು ಕೊರೋನ! ದಿಲ್ಲಿಯಿಂದ ಹಳ್ಳಿಯವರೆಗೆ ಬೆಂಗಳೂರವರೆಗೆ ಸದ್ದೇ ಇಲ್ಲದೆ, ಗೊತ್ತೇ ಆಗದೇ, ಗಲ್ಲಿಗಲ್ಲಿಗೆ ಮೆಲ್ಲಮೆಲ್ಲಗೆ...! ಅಲ್ಲೆಲ್ಲಿಂದಲೋ ಇಲ್ಲಿಯವರಗೆ, ಮನೆಯಲೆಲ್ಲರನೂ ಕೂಡಿಹಾಕಿಸಿ ಆನ್-ಲೈನಲ್ಲೇ ಕೆಲಸ ಮಾಡಿಸಿ ಸಾಮಾಜಿಕ ಅಂತರದಲಿ ’ಆಷಾಡ ನೆನಪಿಸಿ’- ಬಂದೇ ಬಿಟ್ಟಿತು... ! ನಾವಿದ್ದೆವು ಆಫೀಸಿನಲ್ಲಿ ಹೀರುತ್ತಾ... ಕಾಫೀ, ಪುಟ್ಟ ಕಪ್ಪಿನಲ್ಲಿ; ನೋಡುತ್ತಾ...........! ಚೆಲುವಿನ ಲಲನೆಯರ, ಜತೆಗೆ ಕೆಲಸವನು ಸರಿಯಾಗಿ- ಮಾಡದೆ ಎಂದಿನಂತೆ! ಯಾರೋ ಅಂದರು.... "ನೀ ಬಂದಿಳಿದೆ ದಿಲ್ಲಿಗೆ"- ನಾವಂದುಕೊಂಡೆವು: "ಬಂದರೇನಾಯಿತು? ಅಲ್ಲಿಗೆ”- ಬರಲಾರೆ ನೀನು ಇಲ್ಲಿಗೆ- ಬೆಂಗಳೂರಿನ ಗಲ್ಲಿಗೆ! ಸ್ವದೇಶ - ವಿದೇಶ, ಹಳ್ಳಿ - ಸಿಟಿ, ಪ್ರದೇಶ ಎಲ್ಲೆಲ್ಲೂ ನೀನೆ! ಎಲ್ಲೆಇಲ್ಲದಾಗಿದೆ ನಿನ್ನಾಟ. ಗಂಡು ಹೆಣ್ಣೆನ್ನದೆ ಶಿಶುವನ್ನದೇ...., ಮುಪ್ಪು-ಯೌವ್ವನವಾಗಲಿ, ಆವರಿಸಿದೆಲ್ಲರಿಗೂ ಕಣ್ಣು ಮಿಟುಕಿಸುವಷ್ಟರಲ್ಲಿ- ಕೊರೋನಾ, ಒಂದು-ಬಂದು; ವಕ್ಕರಿಸಿತೆಂದರೆ: ಎಂಥ ಘಟಾನುಘಟಿಯೂ ಹಾಸಿಗೆ ಹಿಡಿವನು- ದಿನಕಳೆಯಲು - ಒಂಟಿಯಾಗಿ ಸೋತೇಹೋಗಲು ತೃಣ ಕಣದ ಪರಾಕ್ರಮದೆದುರಿಗೆ! ಬೆಡ್ಡಿಲ್ಲ, ಆಕ್ಸಿಜನ್ನಿಲ್ಲ, ಆಸ್ಪತ್ರೆಗಳಲ್ಲಿ- ಇದ್ದವರಿಗೆ ನಿದ್ದೆಯಿಲ್ಲ ಕಣ್ಣುಗಳಲ್ಲಿ- ಎಂದು ಉಸಿರು- ನಿಲ್ಲುವುದೆಂದು ಕನಸಲೂ......! ಮನಸಲೂ....! ನೀನೆ. ಎಲ್ಲೆಲ್ಲಿದ್ದವರು ಅಲ್ಲಲ್ಲೇ ಸಿಲುಕಿಕೂಂಡರು ಈ ಕೊರೋನಾದಿಂದ, ಮಿಸುಕಿದರೆ ಮಿಡುಕಾಡಿದರೆ ಇರುವುದು ಕೊರೋನಾ- ಕತ್ತಲೆಯ ಕಾಡಲ್ಲಿ - ಹೆಬ್ಬುಲಿಯಂತೆ. ಉಸಿರೊಳಗಡೆ ಸೇರಿ, ಉಸಿರಾಟವನೆ ನಿಲ್ಲಿಸಲು. ಬೇಸಿಗೆಯಿಂದ ಮಳೆಗಾಲದ ಮಧ್ಯದಲಿ..... ಕೊರೋನಾ ಕಾಲವೂ ಕಾಲಿಟ್ಟಿತ್ತು. ವರುಷ ವರುಷದಾ ರ‍್ಷವನೆ ಮರೆಯಾಗಿಸಿತು. ಮನುಜ ಕುಲಕೆ ಕಾಲವೇ ತಾನಾಗಿ- ನಿಗೂಢವಾಗಿ, ಕಾಲಮುಗಿದವರ ಕಾಲದೊಳಗೇ ಸೆಳೆದು.
©2024 Book Brahma Private Limited.