ಸುರೇಶ್ ಕಂಬಳಿಯವರ 'ಮಳೆಹನಿ ಹನಿಗವನ ಸಂಕಲನದಲ್ಲಿ ರಾಜಕೀಯ ಪ್ರಜ್ಞೆ, ಸಾಮಾಜಿಕ ಪ್ರಜ್ಞೆ, ಸಾಂಸ್ಕೃತಿಕ ಕಾಳಜಿ, ದಾಂಪತ್ಯ, ಧರ್ಮ ಮುಂತಾದ ಅಂಶಗಳು ಎದ್ದು ಕಾಣುತ್ತವೆ. ಕೆಲವು ಕಡೆ ಅಂತ್ಯ ಪ್ರಾಸಕ್ಕಾಗಿ ಹಾತೊರೆಯದೇ ಬಂದ ಹಾಗೆ ಸ್ವೀಕರಿಸಿದ್ದಾರೆ. ಚುಟುಕುಗಳು ವಿಭಿನ್ನವಾಗಿದ್ದು ಸ್ವಂತಿಕೆಯಿಂದ ಮೆಚ್ಚುಗೆ ಗಳಿಸುತ್ತವೆ. ಸರಾಗವಾಗಿ ಓದಿಸಿಕೊಂಡು ಹೋಗುವ ಹನಿಗವನಗಳು ಭಾಷಣಕಾರರಿಗೆ ಕೈಪಿಡಿಯಂತಿವೆ. ಕಂಬಳಿಯವರ ಕಾವ್ಯದಲ್ಲಿ ಅಂತಃಕರಣವಿದೆ. ವಿಡಂಬನೆ, ಮೂಢನಂಬಿಕೆ, ರಾಜಕಾರಣದ ಜಾತಿಯ ಬಗ್ಗೆ ತಾತ್ಸರ, ಬಗ್ಗೆ ಆಕ್ರೋಶವಿದೆ. ಬಡವರ ಬಗ್ಗೆ ಅನುಕಂಪವಿದೆ. ರೂಢಿ, ನಗು, ವ್ಯಾಕುಲ, ಮಳೆಹನಿ, ಬರಗಾಲ, ಪ್ರಶ್ನೆ, ಬಜೆಟ್, ಕರುಣೆ, ಪ್ರಶಸ್ತಿ, ಹಸಿವು ಮಾರಾಟ, ದುಸ್ಥಿತಿ ಮುಂತಾದ ಹನಿಗವನಗಳು ಓದುಗರ ಗಮನ ಸೆಳೆಯುತ್ತವೆ. ಕಂಬಳಿ ಅವರಿಗೆ ಭವಿಷ್ಯವಿದೆ. ಅಧ್ಯಯನ ಅನುಭವಗಳಿಂದ ಅವರ ಕಾವ್ಯಕ್ಕೆ ಪಕ್ವತೆ ಬಂದೇ ಬರುತ್ತದೆ. ಅದರ ಆರಂಭವಾಗಿದೆ ಎನ್ನುವುದಕ್ಕೆ ಈ 'ಮಳೆಹನಿ'ಯೇ ಸಾಕ್ಷಿ ಎಂದು ಗಂಗಾವತಿ ಪ್ರಾಣೇಶ್ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.