ಯಶೋಗಾಥರು ಸಂತೋಷ್ ಬಿದರಗಡ್ಡೆ ಅವರ ಕೃತಿಯಾಗಿದೆ. ಪ್ರಸ್ತುತ ಕವನ ಸಂಕಲನದಲ್ಲಿ ಪುರಾಣ, ಇತಿಹಾಸ, ಸಾಮಾಜಿಕ, ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಪರಿಸರ ಕ್ಷೇತ್ರದಲ್ಲಿ ಗಣನೀಯ ಮೌಲೀಕ ಸಾಧನೆ ಮಾಡಿ ಹೊಸ ಭಾಷ್ಯ ಬರೆದ ಚೇತನಗಳ ಕುರಿತು ಬರೆದ ಇಲ್ಲಿನ ಕವಿತೆಗಳು, ನಮ್ಮನ್ನು ಎದುರುಗೊಂಡು ಐತೂಹಲ ಹುಟ್ಟಿಸುತ್ತದೆ. ವಸ್ತುವಿ ಆಯ್ಕೆಯಲ್ಲಿ ವೈವಿದ್ಯತೆ ಇದೆ, ವ್ಯಕ್ತಿ ವಿಶೇಷತೆಯೂ ಇದೆ. ಸಂತೋಷ್ ಬಿದರಗಡ್ಡೆಯವರ ಈ ಕವಿತೆಗಳು ಬಿಡದ ಓದಿಸಿಕೊಂಡು ಹೋಗುವ ಗುಣ ಹೊಂದಿದ್ದು, ಮಕ್ಕಳಿಂದ ಹಿಡಿದು ಎಲ್ಲರಿಗೂ ಮಹಾನ್ ಪುಗಳ ಬಗ್ಗೆ ಒಂದಿಷ್ಟಾದರೂ ಮಾಹಿತಿ ಕಲೆಹಾಕಲು ಸಹಕಾರಿಯಾಗಬಲ್ಲವು ಎಂದು ಸತ್ಯಾನಂದ ಪಾತ್ರೋಟ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2025 Book Brahma Private Limited.