ಕವಿಯ ಜೀವನಾನುಭವ ಮಥನ ಮಾಡಿರುವ ಕೃತಿ ಕವಿ ಬಿ.ಆರ್. ಲಕ್ಷಣರಾವ್ ಅವರ ‘ತುಂಟ’. ಬರಿಯ ಅನುಭವವಲ್ಲ, ಅನುಭಾವದ ಛಾಯೆಯೂ ಅಲ್ಲಿ ಕಾಣಿಸಿದೆ ಎನ್ನುವ ಕವಿ, ಭವಿಷ್ಯ ಪೂರ್ವನಿಶ್ಚಿತವಾದದ್ದು ಎಂಬ ಚಿಂತನೆಯನ್ನು ಮೇಲಿನ ಸಾಲುಗಳ ಮೂಲಕ ಚರ್ಚೆಗೆ ಒಳಪಡಿಸಿದ್ದಾರೆ. ನಮ್ಮ ಅಂತರಾತ್ಮಕ್ಕೆ ನಿಷ್ಠರಾದರೆ ಬೇರೆಯವರಿಗೆ ಅಪ್ರಾಮಾಣಿಕರಾಗಲು ಸಾಧ್ಯವೇ ಇಲ್ಲ ಎಂದು ‘ಅಂತರಂಗಕ್ಕೊಂದು ಒಳ್ಳೆಯತನದ ಬೆಳಕು’ ಹಿಡಿದಿದ್ದಾರೆ. ವಿದ್ಯಾರ್ಥಿನಿಯೊಬ್ಬಳ ಸಾವಿಗೆ ಮರುಗುವ ಮೇಷ್ಟ್ರು, ಮೊದಲ ಬರಹವು ‘ಸುಧಾ’ದಲ್ಲಿ ಪ್ರಕಟವಾದಾಗಿನ ಸಂಭ್ರಮವನ್ನು ನೆನಪಿಸಿದ್ದಾರೆ.ತುಂಟ ಕಣ್ಣುಗಳು ಜೀವನವನ್ನೊಮ್ಮೆ ಹಿಂತಿರುಗಿ ನೋಡಿವೆ. ಹಾಗಾಗಿ ಈ ಕೃತಿ ನಿಜ ಅರ್ಥದ ಮನಸ್ಸಿನ ಮಾತಾಗಿದೆ. ಹಿರಿದಾದ ಅರ್ಥವನ್ನೂ ಅಂತರಾಳದಲ್ಲಿ ಇರಿಸಿಕೊಂಡಿದೆ.
©2024 Book Brahma Private Limited.