ತನ್ನದೇ ಹೆಜ್ಜೆ ಗುರುತಾಗುವ ಬಗೆಯನ್ನು ಒಂದಿಷ್ಟು ಬಚ್ಚಿಟ್ಟುಕೊಳ್ಳದೇ ಅನಾವರಣಗೊಳ್ಳುವ ಬಗೆಯು ಲೇಖಕ ಚಲಂ ಹಾಡ್ಲಹಳ್ಳಿ ಅವರ ‘ಅವಳ ಪಾದಗಳು’ ಕವನ ಸಂಕಲನದಲ್ಲಿ ಕಾಡುತ್ತದೆ. ಸಾವಿರ ಜನರ ನಡುವೆ ಕುಳಿತು ಓದಿದರೂ ಒಂದು ತರಹದ ಏಕಾಂತದ ಪದ್ಯವನ್ನು ಇಲ್ಲಿನ ಕವನಸಂಕಲನ ನೀಡುತ್ತದೆ. ಮೈಯೆಲ್ಲಾ ಹೃದಯವಾಗಿಸುವಂತಹ ಕವನದ ಸಾಲುಗಳು ಇಲ್ಲಿದ್ದು, ಇಡಿ ಇಡಿಯಾಗಿ ಬದುಕಿನ ಜೊತೆ ಬುಗುರಿಯಾಟ ಆಡಿದಂತಹ ಅನುಭವ ಓದುಗರಿಗೆ ದೊರಕುತ್ತದೆ.
©2025 Book Brahma Private Limited.