ನೀ ಹೋಗುವ ಮುನ್ನ ಅರ್ಚನಾ ಎನ್. ಪಾಟೀಲ ಅವರ ಕೃತಿಯಾಗಿದೆ.'ಕೂಡಿಸು ಖುಷಿಯ, ಗುಣಿಸು ಗೆಲುವ; ಘಾಸಿಯಾಗಿಸದಿರು ಯಾರ ಸ್ನೇಹ ಒಲವ ಚಲಿಸು ನೀ ಛಲದಲಿ; ಜಲದ ಝರಿಯಂತೆ ಮುನ್ನುಗ್ಗುತಲಿ! ಕೂಡಿಟ್ಟ ಕೋಟಿ ಠೇವಣಿ, ಕೊನೆಗೆ ನಶ್ವರ ನೋಡ; ಬಡವರಿಗೆ ಕೊಂಚ ನೀಡು, ನೀ ಬದುಕಿದ್ದಾಗ ಮೂಢ!. ಎಂದು ಅಂತರಂಗದ ಕಣ್ಣು ತೆರೆಸುವ ಇವರ ಬರಹಗಳು ದಾರಿದೀಪವಾಗಿ ಬೆಳಕು ಚೆಲ್ಲುತ್ತವೆ; ಎಂತಹ ಕಾಲಕ್ಕೂ ಪ್ರಸ್ತುತವೆನಿಸುತ್ತವೆ. ಭಿಕ್ಷೆಬೇಡಿ ತಿನ್ನುವ ಭಾರದ ಬದಲು, ಭಾರವ ಹೊತ್ತು ತುತ್ತು ತಿನ್ನು ಮೊದಲು'. 'ಹೆದರಿದರೆ ಪರಿಸ್ಥಿತಿ ಬದಲಾಗದು ಬೆವರಿದರೆ ಬೇಗ ಗುಣವಾಗದು, ನಡುಗಿದಷ್ಟು ನಡುಕ ಹೆಚ್ಚು, ಹೆದರಿದಷ್ಟು ಆತಂಕ ಹೆಚ್ಚು' 'ಹೆದರದಿರು ಬೆದರದಿರು ಬಂದದ್ದು ಬರಲಿ ಹೆದರಿದರೆ ನೀ ಹಾಳು! ಬದುಕಿರುವಷ್ಟು ದಿನ ಧೈರ್ಯದಿಂದಲೇ ಬಾಳು!” ಎಂದು ಆತ್ಮಸ್ಥೆರ್ಯ ತುಂಬುವ ಪ್ರತಿಯೊಂದು ಪದಗಳು ಸ್ಫೂರ್ತಿಯ ಸೆಲೆಯಾಗಿವೆ. ಇರುವವರೆಗೂ ಬರೆಯುತಿರಲಿ ಈ ಬೆರಳುಗಳು ಕನ್ನಡ ಸಾಹಿತ್ಯ, ನಾ ಸತ್ತಮೇಲೂ ಉಳಿಯಲಿ ಬರೆದ ಸಾಹಿತ್ಯ' ಎಂಬ ನುಡಿಗಳು ಅರ್ಚನಾರವರ ಕನ್ನಡ ಪ್ರೀತಿಗೆ ಸಾಕ್ಷಿಯಾಗಿವೆ. ನಾಗಶೆಟ್ಟಿ ಪಾಟೀಲ ಗಾದಗಿ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2025 Book Brahma Private Limited.