ಚೈತಾಗ್ನಿ ಕವನಸಂಕಲನವಾಗಿದೆ. ಕವಿತೆಯನ್ನು ಬರೆದು ಓದುಗರ ಬಳಿ ಸೈ ಎನಿಸಿಕೊಳ್ಳುವುದು ಬಹಳ ಸವಾಲಿನ ಕೆಲಸ. ಇಂತಹ ಸವಾಲಿನಲ್ಲೂ ಸೈ ಎನಿಸಿಕೊಳ್ಳುವರಿದ್ದಾರೆ ಎಂದರೆ ಅವರ ಕವಿತ್ವ ಎಷ್ಟು ಪ್ರಖರವಾಗಿದೆ ಎಂದು ಕಲ್ಪಿಸಿಕೊಳ್ಳಬೇಕು. ವಾಮನ ಹೇಳುವಂತೆ "ಪ್ರತಿಭೆ ಕಾವ್ಯದ ಬೀಜ" ಎನ್ನುವ ಹಾಗೆ ಕವಿತೆಗಳನ್ನು ಬರೆಯುವಾಗ ಕವಿಗೆ ಇರಬೇಕಾದದ್ದು ಪ್ರತಿಭೆ. ಇಂತಹ ಪ್ರತಿಭೆಗಳಲ್ಲಿ ನಮ್ಮ ನಡುವಿನ ಅಪರೂಪದ ಕವಯಿತ್ರಿ ಪಲ್ಲವಿ ಬೇಲೂರು ಅವರು ಕೂಡ ಓರ್ವರು. ಅವರ ಕಾವ್ಯಶಕ್ತಿ ಬಹಳಷ್ಟು ಪರಿಚಿತ. ಪದಗಳ ನಾವಿನ್ಯತೆ, ಅವರ ಕಾವ್ಯದ ವಸ್ತು ಎಲ್ಲವೂ ವಿಭಿನ್ನ ಹಾಗೂ ವಿಶೇಷವಾಗಿರುತ್ತದೆ. "ಅಭಿಸಾರಿಕೆ" ಎಂಬ ಕವನ ಸಂಕಲನದಿಂದ ಓದುಗ ವಲಯಕ್ಕೆ ಆಪ್ತರಾಗಿರುವ ಇವರ "ಚೈತಾಗ್ನಿ" ಕೃತಿಯೂ ಕೂಡ ಎಲ್ಲರನ್ನೂ ಗೆಲ್ಲುತ್ತದೆ ಎಂಬ ಭರವಸೆ ಓದುಗನಾಗಿ ನನಗೂ ಇದೆ. ಎಂದು ರಾಜೇಶ್ ಬಿ ಹೊನ್ನೇನಹಳ್ಳಿ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2025 Book Brahma Private Limited.