ಸೃಜನಶೀಲ ಕಾವ್ಯಸಿರಿ ಸಂತೋಷ್ ಬಿದರಗಡ್ಡೆ ಅವರ ಕವನ ಸಂಕಲನವಾಗಿದೆ. ಇಂದು ಸಾಹಿತ್ಯದ ಕಡೆಗೆ ಯುವಕ ಯುವತಿಯರು ಆಗಮಿಸುತ್ತಿರುವುದು ಸಂತಸದ ಸಂಗತಿ. ಯುವಜನಾಂಗ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಶ್ರೀಧರ ಆಸಂಗಿಹಾಳ ಆವರ ಮುಂದಾಳತ್ವದಲ್ಲಿ ಹೊಸ ಸಾಹಿತ್ಯ ಬಳಗವೊಂದು ಸೇವೆಗೈಯಲು ಮುಂದಾಗಿರುವುದು, ಸಾಹಿತ್ಯ ಲೋಕದಲ್ಲಿ ಇದು ಹೊಸ ಅಲೆಯನ್ನು ಸೃಷ್ಟಿಸಲಿದೆ ಎಂಬ ನಂಬಿಕೆ ಇದೆ. ಸೃಜನಶೀಲ ಸಾಹಿತ್ಯ ಬಳಗದಿಂದ ಉಷ್ಣಸಿರಿ ಹೊರಬರುತ್ತಿರುವುದು ಹಾಗೂ ಇಲ್ಲಿನ ಪ್ರತಿಯೊಬ್ಬ ಕವಿಗಳ ಕವನದ ಭಾಷೆ ವಿಭಿನ್ನವಾಗಿದೆ ಮತ್ತು ಸುಂದರವಾಗಿದೆ. ಹಿರಿಯ ಸಾಹಿತಿ ಚೆನ್ನವೀರ ಕಣವಿ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2025 Book Brahma Private Limited.