"ಚಂದಮಾಮ" ಸಂತೋಷ್ ಬಿದರಗಡ್ಡೆ ಅವರ ಕೃತಿಯಾಗಿದೆ. ಯುವ ಮನಸುಗಳಿಗೆ ಸದಾ ಸ್ಫೂರ್ತಿಯಾಗಿ ಅವರ ಹೃದಯದ ಕಣ್ಣು ಕವಿತೆಗಳಾಗಿ ಅಭಿವ್ಯಕ್ತಿ ಹೊಂದಿ, ಕಣ್ಣಿಗೆ ಕಾಣದ್ದನ್ನು ಕಿವಿಗೆ ಕೇಳದ್ದನ್ನು ಅವರ ಹೃದಯದ ಮಿಡಿತದ ಕವಿತೆಯ ಪದಗಳಾಗಿ ಮನದ ಕಲ್ಪನೆಯಾಗಿ ಹೃದಯ ತಟ್ಟಿದೆ. ಭಾವನೆಗಳ ಲಿಪಿಯು ಅನನ್ಯವಾಗಿ ಶಬ್ದಗಳ ಸಮ್ಮಿಲನದ ತೇರನ್ನು ಎಳೆದು ತಂದಿವೆ. ಯಾಂತ್ರಿಕ ಯುಗದಲ್ಲೂ ಚಿಂತನೆ, ಭಾವನೆ ಹಸಿರಾಗಿವೆ. ಪ್ರಕೃತಿ, ನೆಲಜಲ, ನಾಡುನುಡಿ, ತಾಯಿ ವಾತ್ಸಲ್ಯ, ಯಶೋಗಾದರು. ಪ್ರೀತಿ ಪ್ರೇಮಗಳೊಂದಿಗೆ ಪ್ರಸ್ತುತವಾದ ಹಲವು ಹತ್ತು ವಿಚಾರಗಳಿವೆ. ಈ ಎಲ್ಲವನ್ನು ತಮ್ಮ ಏಳನೇ ಕೃತಿ “ಚಂದಮಾಮ" ಕವನ ಸಂಕಲನದಲ್ಲ ಸೆರೆ ಹಿಡಿದಿರುವ ಸಂತೋಷ್ ಅದರಗಡ್ಡೆ ಯವರು ಈಗಾಗಲೇ ಸಾಹಿತ್ಯ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಸಾಹಿತ್ಯ ಸಂಘಟನಾ ಚತುರ ಸ್ನೇಹಜೀವಿಯಾಗಿದ್ದಾರೆ. ಯು.ಎನ್. ಸಂಗನಾಳಮಠ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2025 Book Brahma Private Limited.