“ದಾಂಪತ್ಯ ಗೀತ” ಕೃತಿಯು ಸುಮತೀಂದ್ರ ನಾಡಿಗ್ ಅವರ ಕವನಸಂಕಲನವಾಗಿದೆ. ಈ ಕೃತಿಯು 1986ರಲ್ಲಿ ಪ್ರಕಟವಾದ 31 ಪುಟಗಳ ಅಚ್ಚುಕಟ್ಟಾದ ಪುಸ್ತಕ. 2004ರ ಮರುಮುದ್ರಣದಲ್ಲಿ ಕೆಲವು ಟಿಪ್ಪಣಿಗಳು ಮತ್ತು ರೇಖಾಚಿತ್ರಗಳು ಹೊಸದಾಗಿ ಸೇರಿವೆ. ಇದನ್ನು ಅತ್ಯಂತ ಸಹಜವಾಗಿ ಮತ್ತು ಸಾರ್ಥಕವಾಗಿ ಮಾಲತಿ ಅವರಿಗೆ ಅರ್ಪಿಸಲಾಗಿದೆ. ಅವರೇ ಇದಕ್ಕೆ ಬೆನ್ನುಡಿಯನ್ನೂ ಬರೆದಿದ್ದಾರೆ. ಯು.ಆರ್. ಅನಂತಮೂರ್ತಿಯವರ ಆರು ಪುಟಗಳ ಮುನ್ನುಡಿಯೂ ಇದಕ್ಕಿದೆ. ಪಂಪನ ಚಂಪಕಮಾಲಾ ವೃತ್ತದ ಛಂದಸ್ಸಿನ ಒಂದು ಸಾಲನ್ನು ಎರಡಾಗಿ ತುಂಡು ಮಾಡಿ ಇಲ್ಲಿ ಪ್ರಯೋಗಿಸಲಾಗಿದೆ. ಮಧ್ಯೆ ಒಂದು ಸಾಂಗತ್ಯವೂ ಇದೆ. ಆದರೂ ಮಾತ್ರೆಯ ಲಯ ಇಲ್ಲಿ ಪ್ರಧಾನವಾಗುವುದಿಲ್ಲ. ಇದು ಕಥನ ಕವನ ಮತ್ತು ಮುಕ್ತಛಂದಸ್ಸಿನ ಕಸಿಯಂತೆ ತೋರುತ್ತದೆ.
©2024 Book Brahma Private Limited.