ಭಾವನೆಗಳ ಆಗಸದಲ್ಲಿ ಮೂಡಿಬಂದ ಚುಕ್ಕಿಗಳು ಪದಪುಂಜಗಳಾಗಿ ಕಏತಗಳಾಗಿ ಅರಳವ. ಹುಲ್ಲಿನ ಮೇಲೆ ಚೆಲ್ಲಿರುವ ಮಂಜಿನ ಹನಿಗಳ ತರಹ ಮುತ್ತಿನಂತೆ ಕಂಗೊಳಿಸುತ್ತವೆ. ಮನಸ್ಸಿಗೆ ಮುದ ನೀಡುತ್ತವೆ. ಇದು ಬಿಜಯಲಕ್ಷ್ಮಿ ಸತ್ಯಮೂರ್ತಿ ಅವರ ಚುಕ್ಕಿ ಹನಿಗವಿತೆಗಳ ಸಂಕಲನದ ವೈಶಿಷ್ಟ್ಯ. ಅವರ ಮನಸ್ಸಿನ ಕನ್ನಡಿಯಲ್ಲಿ ಮೂಡಿ ಬಂಧಿಯಾದ ಭಾವಗಳು ಇಲ್ಲಿ ಕವನ ರೂಪ ಪಡೆದಿವೆ. ಅಲ್ಲೊಂದು ಪ್ರೀತಿಯಿದೆ, ನೀತಿಯಿದ, ಭಾವಾನುಭಾವವಿದೆ. ಪದಗವಿತೆಗಳಾಗಿ ಸೃಜಿಸಿರುವ ಚುಟುಕುಗಳು ಎಂತಹವರನ್ನೂ ಮೋಡಿ ಮಾಡುವಂತಿವೆ. ಅವರು ಕಿರುಗವಿತೆಗಳಾಗಿ ಅಭಿವ್ಯಕ್ತಿಸುವ ಕವಿತೆಗಳು ಇತರ ಕವಿತೆಗಳಗಿಂತ ಭಿನ್ನವಾಗಿ ನಿಲ್ಲುತ್ತವೆ. ತಮ್ಮದೇ ಶೈಲಿಯಲ್ಲಿ ಬರೆಯುವ ಅಭ್ಯಾಸ ರೂಢಿಸಿಕೊಂಡಿರುವ ವಿಜಯಲಕ್ಷ್ಮಿ ಸತ್ಯಮೂರ್ತಿ ಅವರು ಯಾರನ್ನೂ ಅನುಕರಿಸಲು ಹೋಗುವುದಿಲ್ಲ. ಈಗಾಗಲೇ ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಕೃತಿಗಳನ್ನು ಹೊರತರುವ ಮೂಲಕ ಅವರು ತಮ್ಮದೇ ಆದ ಹೆಜ್ಜೆ ಗುರುತನ್ನು ಮೂಡಿಸಿದ್ದಾರೆ. ಸಾಕಷ್ಟು ಪ್ರಶಸ್ತಿಗಳನ್ನೂ ಗಳಸಿ ಮನ್ನಣೆಗೆ ಪಾತ್ರರಾಗಿದ್ದಾರೆ. ಚುಕ್ಕಿ ಹನಿಗವನ ಸಂಕಲನ ಅವರು ಸಾಹಿತ್ಯ ಲೋಕಕ್ಕೆ ನೀಡುತ್ತಿರುವ ಹೊಸ ಕೊಡುಗೆ. ಅವರ ಈ ಸಾಹಿತ್ಯ ಕೃಷಿ ಜನಮನ ತಲುಪಿ ಶಾಶ್ವತವಾಗಿ ನೆಲೆನಿಲ್ಲಲಿ ಎಂದು ಆಶಿಸುತ್ತೇನೆ.
©2024 Book Brahma Private Limited.