ಬುದ್ಧಚರಣ

Author : ಎಚ್. ಎಸ್. ವೆಂಕಟೇಶಮೂರ್ತಿ

Pages 280

₹ 350.00




Year of Publication: 2020
Published by: ಅಂಕಿತ ಪುಸ್ತಕ
Address: 53, ಶ್ಯಾಮಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು- 560004

Synopsys

‘ಬುದ್ಧಚರಣ’ ಎಚ್.ಎಸ್. ವೆಂಕಟೇಶಮೂರ್ತಿ ಅವರ ಲಲಿತ ಛಂದೋಲಯದ ಮಹಾಕಾವ್ಯ. ಹಿರಿಯ ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿಯವರು ಗೌತಮ ಬುದ್ಧನ ಕುರಿತಾಗಿ ಬರೆದ ಕಾವ್ಯಗುಚ್ಛ ಈ ಕೃತಿ. ಈ ಕೃತಿ ಕಾವ್ಯಾತ್ಮಕವಾಗಿ ಬುದ್ಧನ ಜೀವನ ಚರಿತ್ರೆಯನ್ನು ವಿವರಿಸುತ್ತದೆ.

About the Author

ಎಚ್. ಎಸ್. ವೆಂಕಟೇಶಮೂರ್ತಿ
(23 June 1944)

ವೆಂಕಟೇಶ ಮೂರ್ತಿ ಅವರು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಎಂಬ ಸಣ್ಣ ಹಳ್ಳಿಯಲ್ಲಿ ಮಧ್ಯಮವರ್ಗದ ಕುಟುಂಬವೊಂದರಲ್ಲಿ 23-06-1944ರಲ್ಲಿ ಜನಿಸಿದರು. ಮೂವತ್ತು ವರ್ಷಗಳ ಕಾಲ ಗ್ರಾಮ್ಯಜೀವನ ನಡೆಸಿ ನಂತರ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ 1973ರಲ್ಲಿ ನೇಮಕಗೊಂಡರು. 2000 ರಲ್ಲಿ ನಿವೃತ್ತರಾದ ಅವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪ್ರಾರಂಭದಲ್ಲಿ ಯಕ್ಷಗಾನ, ಬಯಲಾಟದಂಥ ರಂಗಪ್ರದರ್ಶನಗಳು ಇವರ ಮೇಲೆ ಗಾಢ ಪ್ರಭಾವ ಬೀರಿದವು. ಬಾಲ್ಯದಲ್ಲೇ ಕುಮಾರವ್ಯಾಸ, ಪುರಂದರ, ಲಕ್ಷ್ಮೀಶ ಮೊದಲಾದವರ ಕೃತಿಗಳ ನಿಕಟ ಸಂಪರ್ಕ ದೊರೆಯಿತು. ಮುಂದೆ ಕನ್ನಡ, ಸಂಸ್ಕೃತ, ಇಂಗ್ಲಿಷ್ ಸಾಹಿತ್ಯ ಪರಂಪರೆಯೊಂದಿಗೆ ನಡೆಸಲಾದ ...

READ MORE

Reviews

‘ಬುದ್ಧಚರಣ’ಕೆ ಶರಣು: ಜಿ.ಎನ್. ರಂಗನಾಥ ರಾವ್‌

--

ಎಂ.ಎಂ.ಕಲಬುರ್ಗಿ ಅವರ ಸಮಗ್ರ ಸಾಹಿತ್ಯ ಸಂಪುಟಗಳು

ತೀರಾ ಇತ್ತೀಚೆಗೆ ಅಂದರೆ 2020ರಲ್ಲಿ ಹಿರಿಯ ಕವಿ ಎಚ್.ಎಸ್. ವೆಂಕಟೇಶಮೂರ್ತಿ (ಎಚ್ಚೆಸ್ವಿ) ಯವರ 'ಬುದ್ಧ ಚರಣ ಮಹಾಕಾವ್ಯ ಪ್ರಕಟವಾಯಿತು. ಬಹುಶಃ ಕನ್ನಡ ಮಹಾಕಾವ್ಯಗಳ ದರ್ಶನದ ಸರಣಿಯಲ್ಲಿ ಲೇಟೆಸ್ಟ್ ಅನ್ನಬಹುದಾದರೆ ಎಚ್ಚೆಸ್ವಿಯವರ ಬುದ್ಧಚರಣವೇ ಇದ್ದೀತು. ಮಹಾಕಾವ್ಯದ ಗಂಗಾವತರಣಕ್ಕೆ ಬರವಿಲ್ಲ ಎಂದು ಸಾಕ್ಷೀಕರಿಸಿದ ಬುದ್ಧಚರಣವು ಮಹಾನದಿಯೂ ಹೌದು. ಭೋರ್ಗರೆದು, ಧುಮ್ಮಿಕ್ಕುವುದನ್ನು ಜಟೆ ಬಿಚ್ಚಿ ನಿಂತು ತಡೆದು ಮಂದ್ರ ಜುಳುಜುಳು ನಿನಾದದೊಂದಿಗೆ ತೊರೆಯಂತೆ ಇಳಿದು ಕನ್ನಡದ ನಾಡಿನಲ್ಲಿ ಗಂಗಾವಳಿಯಾಗಿ ಹರಿಯಗೊಟ್ಟು ಹರನೆನಿಸಿದವರು ಹೋದಿಗ್ಗೆರೆಯ ಶ್ರೀನಿವಾಸ ವೆಂಕಟೇಶ್ ಮೂರ್ತಿ (ಎಚ್ಚೆಸ್ವಿ)ಯವರು. ಕೋಟ್ಯಂತರ ಕವಿತೆಗಳು ಊಟೆಯಂತೆ ಚಿಮ್ಮಿ ಸಣ್ಣ ಸಣ್ಣ ಹೊಳೆ-ಹಳ್ಳಗಳ ತೆರದಿ ಹರಿಯುತ್ತಿದ್ದರೂ ಕವಿಯ ಧಮನಿ ಧಮನಿಯಲ್ಲಿ ಮಾತ್ರವೇ ಮಹಾನದಿಯೆನ್ನಿಸುವುದು ಚೋದ್ಯವೇ ಸರಿ. ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ’ ರ್ಮನಂ' ಮಹಾಕಾವ್ಯವು ಕನ್ನಡ ಸಾರಸ್ವತ ಪ್ರಪಂಚದ ಮಹಾಸಿದ್ಧಿಗಳಲ್ಲೊಂದು, ಮಾಳವದ ಕಾಲ ಮುಗಿದು ಹೋಯಿತು ಎನ್ನುವವರಿಗೆ ಒಂದು ಸವಾಲಾಗಿ ಮಹತ್ತಾದುದಕ್ಕೆ ಹಂಬಲವನ್ನುವುದಕ್ಕೆ ಒಂದು ಸಾಕ್ಷಿಯಾಗಿ 'ರಾಮಾಯಣ ದರ್ಶನಂ' ಸೃಷ್ಟಿಯಾಗಿದೆ. ಪ ಫ ಯುಗಧರ್ಮವನ್ನು ಮೈಗೂಡಿಸಿಕೊಂಡು ಎಷ್ಟರ ಮಟ್ಟಿಗೆ ಹೊಸದಾಗಬಹುದು. ಇದಕ್ಕೆ ಈ ಮಹಾಕಾವ ಉಜ್ವಲ ಉದಾಹರಣೆಯಾಗಿದೆ" ಎಂಬ ರಾಷ್ಟ್ರಕವಿ ಗೋವಿಂದ ಮಗಳ ಅಂದಿನ ದರ್ಶನ, ಇಂದಿಗೂ ಅದೇ ನಿದರ್ಶನವಾದುದು, ಎಚ್ಚೆಸ್ವಿಯವರ ಮಹಾಕಾವ್ಯದ ಸಂದರ್ಭದಲ್ಲಿ: ಎ. ಗೋಪಾಕರ 'ಭಾರತ ಸಿಂಧುರಲಿ, ಸಂ.ಶಿ, ಭೂಸನೂರಮಠರವರ ಅವಮಾನವ" ಮಹಾಕಾವ್ಯದ ಸಮೀಕ್ಷೆ ಮಾಡಿದ್ದ ಕೀರ್ತಿನಾಥ ಕುರ್ತಕೋಟಿಯವರು ನಮ್ಮ ಹಳೆಯ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತಗಳಂತೆ ಈ ಹೊಸ ಮಹಾಕಾವ್ಯಗಳು ವೀರಗಾಥಗಳಲ್ಲ. ಇವೆಲ್ಲ ಹೆಚ್ಚಾಗಿ ಆಧ್ಯಾತ್ಮಿಕ ಸದಿಂದ ಕೂಡಿದ ಕೃತಿಗಳಾಗಿವೆ ಎಂದಿದ್ದರು. ಆದೇ ನೋಟದಲ್ಲಿ ನನಗೆ ಎಚ್ಚೆಯವರ ಬುದ್ಧಚರಣ ಓದಿನಿಂದಾದ ಅನುಭವವನ್ನು ಅಕ್ಷರಗಳಲ್ಲಿ ಹಿಡಿದಿಡುವ ಪ್ರಯತ್ನ ಮಾಡಿದ್ದೇನೆ.

ನಮಗೆಲ್ಲರಿಗೆ ಎಚ್ಚೆಸ್ಟಿ ಕಹಿಯಾಗಿಯೇ ಆಪ್ತರು, ಕವಿತ್ವದ ಆಚೆ ಅವರ ಸೃಜನಶೀಲತೆ ನಾಟಕ, ಕಿತ, ಹಾಮಬಲ, ಜೀವನ ಚರಿತೆ, ಅನುವಾದ, ವಿಮರ್ಶೆ ಹೀಗೆ ಹಲವು ಬೀಸುಗಳಲ್ಲಿ ವಿಸ್ತರಿಸಿಕೊಂಡಿದ 1968 ರಲ್ಲಿ ಪ್ರಕಟಗೊಂಡ ವೃತ್ತ' ಎಂಬ ಮೊದಲ ಕವನ ಸಂಕಲನದಿಂದ ಕವಿಯಾಗಿ ಕಾಣಿಸಿಕೊಂಡ ಎಚ್‌ಎಸ್‌ವಿ ಬುದ್ಧಚರಣಕ್ಕೆ ಶರಣಾಗುವವರೆಗಿನ 25-26 ವರ್ಷಗಳ ಅನಂತರ ಒಂದು ತಲೆಮಾರಿನಲ್ಲಿ ಮಹಾಕವಿಯಾಗಿ ಬೆಳೆದ ಪರಿ ಹೆಮ್ಮೆಯದು. ವ್ಯಾಧನೊಬ್ಬ ಹುತ್ತವೊಡೆದು ವಾಲ್ಮೀಕಿಯಾಗಿ ಹೊರಬಂದ ತಲೆಮಾರಿನ ಕಾಲಾವಧಿಯ ವಿಸ್ತಾರವೆಷ್ಟೇನೋ ಗೊತ್ತಿಲ್ಲ. ಆದರೆ ಮನುಕುಲದುದ್ದಕ್ಕೂ ಅವನು ಕೀರ್ತಿಸಿದ ರಾಮಾಯಣ ಮಹಾಕಾವ್ಯವು ಉದ್ಧರಿಸಿದ ತಲೆಮಾರುಗಳೆಷ್ಟೋ! ಮತ್ತೆ ಮತ್ತೆ ಅದು ದರ್ಶನವೀಯುತ್ತಲೇ ಇದೆ. ಆಮೇಲೆ ಭಾರತೀಯರ ಮನೋಗತವು ವ್ಯಾಸರಲ್ಲಿ ಮಹಾಕಾವ್ಯವಾಗಿ ಉದ್ಭವಿಸಿದ್ದು 'ಗಂಗೇಚ ಯಮುನೇಚೈವ..” ರೀತಿಯಲ್ಲಿ ಹರಿಯುತ್ತಲೇ ಇದೆ. ಭಾರತೀಯ ವಿವಿಧ ಭಾಷಾ ವೈಖರಿಯನ್ನು ಸದ್ಯಕ್ಕೆ ಒತ್ತಟ್ಟಿಗೆ ಇಡೋಣ ಕನ್ನಡವೊಂದರಲ್ಲೇ ಮಹಾಕಾವ್ಯದ ಮಹೋದಯವನ್ನು ಕಣ್ಣುಂಬಿಕೊಂಡರೆ ಪರಂಪರೆಯ ಆಗಾಧತೆ ಮೈಮರೆಸುತ್ತದೆ. ಪಂಪನ ಆದಿಪುರಾಣ, ವಿಕ್ರಮಾರ್ಜುನ ವಿಜಯದಿಂದ ಆರಂಭಗೊಂಡು ಗದಾಯುದ್ಧ ಹಾಗೂ ಅಜಿತ ಪುರಾಣ (ರನ್ನ), ಹರಿಶ್ಚಂದ್ರ ಕಾವ್ಯ (ರಾಘವಾಂಕ), ಶಾಂತಿ ಪುರಾಣ (ಸೊನ್ನ) ಗಿರಿಜಾ ಕಲ್ಯಾಣ (ಹರಿಹರ), ರಾಮಾಯಣ ದರ್ಶನಂ (ಕುವೆಂಪು), ಭಾರತ ಸಿಂಧು ರಶ್ಮಿ (ಗೋಕಾಕ್), ಬುದ್ಧಚರಿತೆ (ಡಾ.ಎಲ್.ಬಸವರಾಜ), ಭವ್ಯ ಮಾನವ (ಸಂ.ಶಿ ಭೂಸನೂರಮಠ), ಶ್ರೀ ಹರಿಚರಿತ (ಪತಿನ), ಇದೀಗ ಬುದ್ಧಚರಣದವರೆಗೂ, ಕಾವೇರಿಯಾಗಿ, ತುಂಗ-ಭದ್ರೆಯಾಗಿ ಹರಿಯುತ್ತಲೇ ಇರುವ ಮಹಾಕಾವ್ಯದ ಓಘಕ್ಕೆ ತಡೆಯಿಲ್ಲ. ಎಷ್ಟೇ ಕವಿತೆಗಳು ಚಿಮ್ಮಿ ತೊರೆಯಾಗಲಿ, ಕಾವ್ಯಗಳು ನದಿಯಾಗಿ ಹರಿಯಲಿ ಮತ್ತೂ ಹುಟ್ಟುವ ಪದಗಳ ಸಾಲು, ಶಬ್ದಗಳ ಓಳಿ ಬತ್ತಲಾರದ ಗಂಗೆಯಂತಿರುವುದು ವಿಸ್ಮಯವಲ್ಲವೇ? ‘

ಹೆಸರಾಂತ ಚಾರಿತ್ರಿಕ ಮಹಾಕಾವ್ಯಗಳಲ್ಲಿ ಬಸವರಾಜು ಅವರ ಬುದ್ಧ ಚರಿತೆ, ಭೂಸನೂರುಮಠ ಅವರ ಭವ್ಯ ಮಾನವ ಪದೇ ಪದೇ ವ್ಯಾಖ್ಯಾನಕ್ಕೇಳಿಸುತ್ತವೆ. ಈಗ ಗೋಚರಿಸಿ, ದರ್ಶನವೀಯುತ್ತಿರುವ ಬುದ್ಧಚರಣ ಪಾದಾಂಬುಜವು ಈ ದಿನೋದಯದ ಅಲಂಕಾರವಾಗಿದೆ.

ಎಚ್ಚೆಸ್ವಿಯವರ ಕಾವ್ಯ ಸಲಿಲದಲ್ಲೆಲ್ಲೂ ಹಿಂದೆ ಬುದ್ಧ ಕಾರುಣ್ಯವು ಇಣುಕಿದ್ದು ಕಾಣಿಸಲಿಲ್ಲ. ಪ್ರಸಿದ್ಧ ವಿಮರ್ಶಕ ಎಸ್. ಆರ್. ವಿಜಯಶಂಕರರವರು ಪ್ರಕಟಿಸಿದ 'ಎಚ್ಚೆಸ್ವಿ ಕಾವ್ಯ ಸಾತತ್ಯ'ದಲ್ಲಿ ಬುದ್ಧ ಭಾವ ರಸಧಾರೆಯನ್ನು ಗುರುತಿಸಿದ್ದು ಕಾಕತಾಳೀಯವೇ? ಗೊತ್ತಿಲ್ಲ. ಕವಿಯೂ ಒಬ್ಬ ಅವಲೋಕಿತೇಶ್ವರನೇ, ನೋಡುವುದೇ ಒಂದು ಧ್ಯಾನವೆಂದು ಬುದ್ಧನು ಅದ್ದಲ್ಲದೇ ಅಪ್ಪಣೆ ಕೊಡಿಸಿರುವನೆ? ಎಂಬ ಸ್.ಆರ್.ವಿಯವರ ಒಳನೋಟದಲ್ಲಿ ಎಚ್‌.ಎಸ್‌.ವಿಯವರಲ್ಲಿನ ಬುದ್ಧಕಾವ್ಯಾನುಸಂಧಾನಗೊಂಡುದು ವ್ಯಕ್ತವಾಗಿದೆ. ಎಸ್‌ ಆರ್‌ವಿ ಈ ಸಾಲುಗಳನ್ನು ಬರೆಯುವಾಗ ಎಚ್‌ಎಸ್‌ವಿಯವರು ಬುದ್ಧ ಮಹಾ ಜವ್ವದ ಕುರಿತಾಗಿ ಆಡಿದ್ದಿರಲಿಕ್ಕಿಲ್ಲ. ಬುದ್ಧಚರಣವನ್ನು ಲಲಿತ ಛಂದೋಲಯದ ಮಹಾಕಾವ್ಯ ಎಂದಿರುವ ಎಚ್ಚೆಸ್ವಿಯವರು ಆರಂಭಕಾಂಡದಿಂದ ಪೂರ್ಣಕಾಂಡದವರೆಗೆ ಎಂಟು ಅಧ್ಯಾಯಗಳಲ್ಲಿ ಬದ್ಧನನ್ನು ಕಂಡರಸಿದ್ದಾರೆ. ನಾನು ಅವರಲ್ಲಿ ಗುರುಗಳೆ, ಅಧ್ಯಾಯಗಳನ್ನು ಕಾಂಡವೆಂದೇಕ ಎಂದು ಕೇಳಿದ್ದೆ. ಅದಕ್ಕವರು ಪ್ರಾಚೀನ ಮಹಾಕಾವ್ಯದ ಮಾದರಿ, ಅದೇ ವೇ? ಎಂದಿದ್ದರು. ನಿಜ, ವಾಲ್ಮೀಕಿ ರಾಮಾಯಣದ ಅಧ್ಯಾಯಗಳೂ ಕಾಂಡಗಳಲ್ಲಿ ಚಿಗುರೊಡೆದಿವೆ. ನನಗೆ ಕಾವ್ಯ ಪರಂಪರೆಯ ಹೊಳಹ- ರೂಹು ಇದೆ, ಆನ್ನಿಸಿತು. ಮೂಲವೊಂದ, ನದಿಯೂ ಏನೇ ಆದರಲ್ಲಿ ಹೊಸ ನೀರು ಹರಿದಿದೆ, ದೂಸನೂರಮಠರವರ ಭವ್ಯ ಮಾನವ ಕೂಡ ಕಾಂಡಗಳಲ್ಲಿ, - ವ್ಯಕ್ತವಾಗಿದೆ. ನಮ್ಮ ಪುರಾಣಕಥನದ ಪಾತ್ರಗಳೆಲ್ಲ ಅವೇ ಆಗಿದ್ದರೂ ತಾಳಮದ್ದಳೆಯ ಅರ್ಥಧಾರಿ ಬೇರೆ ಬೇರೆಯಾದಂತೆ ಪಾತ್ರ ಚಿತ್ರಣ ಕಟ್ಟಿಕೊಡುವುದು ಬೇರೆ ಬೇರೆ ರೀತಿಯಲ್ಲಿಯೇ. ನನಗೆ ಇಲ್ಲಿ ಇನ್ನೊಂದು ವೈಖರಿಯ ಹೊಳಹು ಹೊಳೆದಿದೆ. ಭಾರತೀಯ ಪುರಾಣ ಕಥನದಲ್ಲಿ ಎಂಟನೇ ಅವತಾರದಲ್ಲಿ ಕೃಷ್ಣ ಕಾಣಿಸಿಕೊಂಡಿದ್ದಾನೆ. ಒಂಬತ್ತನೇ ಅವತಾರವೇ ಬುದ್ಧ, ಎಚ್ಚೆಸ್ವಿಯವರ ಕಾವೋತ್ಸಾಹದಲ್ಲಿ ಕೃಷ್ಣ ಮಹೋನ್ನತ, ವಿಜಯಶಂಕರರವರು, ರಾಮನ ಹಾಗೆ ಕೃಷ್ಣನೂ ಅವರ ಕಾವ್ಯದೊಳಗೆ ಬೆಳೆಯುತ್ತಾ ಹೋಗಿದ್ದಾನೆ ಎನ್ನುವ ವ್ಯಾಖ್ಯಾನದಲ್ಲಿ ಎಚ್ಚೆಸ್ವಿಯವರ ಕಾವ್ಯದ ಮಜಲುಗಳನ್ನು ಅವತಾರದಲ್ಲಿ ಬುದ್ಧನಾದ. ತೋರಿಸಿದ್ದಾರೆ. ಎಂಟನೇ ಅವತಾರ ಮುಗಿಸಿದ ವಿಷ್ಣು ಒಂಬತ್ತನೇ ಎಂಟು ಕಾಂಡಗಳ ವಿಸ್ತಾರದ ಇನ್ನೊಂದು ಚರಣವೇ ಬುದ್ಧ ಚರಣ, ಮಹಾಕಾವ್ಯದ ಅನುಸಂಧಾನದಲ್ಲಿ ಆಧ್ಯಾತ್ಮ ಮಾರ್ಗದ ಗಮನವೇ ಪ್ರಧಾನ. ಎಚ್ಚೆಸ್ವಿಯವರಿಗೂ ಆದೇ ಗಮ್ಯತೆ. 'ಬುದ್ಧ ಚಾರಿತ್ರ್ಯ ಮತ್ತು ಬುದ್ಧವಾಣಿಯ ತಿರುಳು' ಅವರಿಗೆ ಬುದ್ಧ ಬಿಂಬವು ಬಸವನಾಗಿ, ಗಾಂಧಿಯಾಗಿ, ವಿನೋಬ ಆಗಿ, ಅಂಬೇಡ್ಕರ್ ಆಗಿ ಭಾರತದಲ್ಲಿ ಮತ್ತೆ ಮತ್ತೆ ಸಂಭವಿಸುವ ವ್ಯಕ್ತಿತ್ವದ ವರ್ಣಿಕೆಗಳಾಗಿವೆ.

ಪೂರ್ವಕಾಂಡದಲ್ಲಿ ಎಚ್ಚೆಸ್ವಿ ಕೇಳಿಕೊಳ್ಳುತ್ತಾರೆ. ಇದಕ್ಕಿದ್ದಂತಾದವನೇ ಬುದ್ಧ' ಪೂರ್ವ ಸಿದ್ಧತೆಗಳಷ್ಟು ಹಿಂದಾದದ್ದು ಎದ್ದು ಬರಲವು ಮೊದಲು ವಿಸ್ತರಣೆಯ ನ್ನೊಮ್ಮೆ ಈವತ್ತಿನ ಸದ್ಯಕ್ಕೆ ಸಹಸ್ರ ಸಹಸ್ರಮಾನಗಳ ಹಿಂದಿನ ತೇಜನ್ನೊಂದು ಮತ್ತೆ ಕಾವ್ಯವಾಗಿ ಒದಗಿದ್ದು ಹೀಗೆ. ಭವ ಭವಾಂತರದಲ್ಲಿ ಮಾಗುತ್ತ ಸಂ! ಭವಿಸಿದ, ಪಾರಮಿ ಮುಗಿಸಿ ಅವೋ ಒಂದಲ್ಲಿ ಬರೋಬ್ಬರಿ ಹತ್ತು ಅವನಾದದ್ದು ಬುದ್ಧ ಕಡೆಗೆ' ಎಂಬ ಅವತಾರ ಕಲ್ಪನೆಯ ಸಾಕಾರದಲ್ಲಿಯ ಬುದ್ಧ ಕೂಡಾ ಒಂದು ಪ್ರತಿಮೆ, ಕೇವಲ ಪ್ರತಿಮಾ ವಿಧಾನಕ್ಕೆ ಆತುಕೊಳ್ಳುವುದರಿಂದ ಅನುಭವ ಇಡಿಯಾಗಿ ಸಂವಹನಗೊಳ್ಳುವ ಸಾಧ್ಯತೆ ಹೆಚ್ಚು ಪ್ರತಿಮೆಗಳಿಗೆ ಯಾವತ್ತೂ ಒಂದು ಇನ್ನೊಂದಾಗುವ ಶಕ್ತಿ ಹೆಚ್ಚಿರುತ್ತದೆ. ವಿಜಯಶಂಕರರು ಎಚ್ಚೆಸ್ವಿಯವರಲ್ಲಿ ಕಂಡ ಕಾವ್ಯಾಂತಃಕರಣದ ನೆಲೆ ಇಲ್ಲಿ ಹೆಚ್ಚು ಅರ್ಥ ಪೂರ್ಣ.

ನಾನು ಹಿಂದೆಯೇ ಹೇಳಿದ ಹಾಗೆ ಇದು ಚಾರಿತ್ರಿಕ ಮಹಾಕಾವ್ಯ ಆದರೆ ಪೌರಾಣಿಕ ಕಥನ ಪರಂಪರೆಯ ಕೊಂಡಿಯಲ್ಲಿರುವ ಪಾತ್ರ ಪುರಾಣ ಪಾತ್ರಗಳಂತೆ ಸಂದರ್ಭ ಸಂಭವಗಳಂತೆ ವಿಸ್ತರಿಸಿಕೊಳ್ಳದೆ ರಾಮಾಯಣದಲ್ಲಿ ರಾಮ ಕೇಂದ್ರಿತದಂತೆ ಬುದ್ಧಚಾರಿತ್ರದಲ್ಲಿ ಸಿದ್ಧಾರ್ಥ ಬುದ್ಧತ್ವಕ್ಕೇರುತ್ತದೆ. ಆದ್ದರಿಂದಲೇ ಬುದ್ಧಚರಣದಲ್ಲಿ ಬುದ್ಧನ ನಿಲ್ದಾಣವು ಆನೇಕ ಹೊಸ ಅರ್ಥದ ಕವಲುಗಳಾಗಿ ಹರಡಿಕೊಂಡಿವೆ. ಇತಿಹಾಸದ ಪುಟಗಳನ್ನು, ಧಾಟಿಯನ್ನು ಇತಿಹಾಸದ೦ತೆಯೇ ರೂಪಿಸಬೇಕಾಗಿರುವುದರಿಂದ (ಇದನ್ನು ಎಸ್‌ಆರ್‌ವಿಯವರು ಕವಿಗಳ ಸಾಂಸ್ಕೃತಿಕ ಜವಾಬ್ದಾರಿ ಎಂದಿದ್ದಾರೆ) ಬುದ್ಧ ಸಂಭವಗಳಲ್ಲೆಲ್ಲೂ ಅಲೆದಾಡಿ ಅಗತ್ಯವಾಗಿದ್ದ ಭಾಷಾಕಲ್ಪ ಮತ್ತು ಲಯ ಪ್ರತೀತಿಯನ್ನು ದಕ್ಕಿಸಿಕೊಂಡಿದ್ದಾರೆ. ಆದಾಗ್ಯೂ ಅವರಲ್ಲಿ ಬುದ್ಧನ ಸಮ್ಯಗ್ಧರ್ಶನ ಕನಸಾಗಿಯೇ ಉಳಿದಿದೆ. ಆತನ ಚಾರಿತ್ರ್ಯ ಮತ್ತು ವಾಣಿಯ ತಿರುಳು ಭಾವರಸಧಾರೆಯಾಗಿ ಹರಿದಿದೆ. ಭೂಸನೂ ಮಠರವರು ಭವ್ಯಮಾನವದ ಸ್ವಸಿವಾಚನದಲ್ಲಿ ಹೀಗೆ ಕೃತಜತೆಯ ನುಡಿಯನ್ನಾಡಿದ್ದಾರೆ. 'ಯಾರೇನೆನ್ನಲಿ ಚಂತೇತಿಹಾಸ ಜೀವನ ಪುರಾಣ ಏನೆನ್ನಲಿ ಮತ್ತೆ ಯಾರೇನೆನ್ನಲಿ ಕಾವ್ಯಾನುಭಾವ ದರ್ಶನ ಮಾಳೆ! ನಡೆಯಲಿ: ಮಹಾಭವೃದಿಟ್ಟೆ ಕಾವ್ಯ ಹಂಗೇಕೆ ಹರಿಯೇಕ ಕಟುಟನಿಟ್ಟೇಕೆ? ವ್ಯಾಕರಣ ಭಂದಸ್ವಲ೦ಕಾರ ಕವಿ ಸಮಯ ಗಣಮಾತೆ ಪಾಸ ನಿಯತಿಯ ಭಂಗಭಯವೇಕೆ? ನೇಮನಿತವ ಮೀರಿ, ಕಾವ್ಯ ಹರಿಯಲಿ ತನ್ನ ಸೀಮೆ ಬಂಧವನ್ನು ದಾಂಟಿ ದಿವ್ಯ ತಪ್ಪನ್ನ ಕ್ಷಮೆ ನಿಮ್ಮದಮ್ಮಯ್ಯು ಎಂಬ ಅವರ ವಿನಯವನ್ನು ಬುದ್ಧಚರಣದ ಎಲ್ಲ ಸಾಲು- ಸಲ್ಲುಗಳಲ್ಲಿ ಎಚ್ಚೆಸ್ವಿಯವರು ಸಾಽಸಿದ್ದಾರೆ. ಕುವೆಂಪುರವರು ರಾಮಾಯಣ ದರ್ಶನವನ್ನು ಮಹಾ ಛಂದಸ್ಸಿನಲ್ಲಿ ಮೆರೆದಿರುವಂತೆ ಗೋಕಾಕರು ಮುಕ್ತ ಛಂದಸ್ಸಿನಲ್ಲಿ ಬೆಳಗಿದರು. ಭೂಸನೂರ ಮಠರವರು ಕಾವ್ಯದ ಪಾರಂಪರಿಕ ನಿಷ್ಠೆಯನ್ನು ಮೀರಿ ವಚನದ ಲಯಗಾರಿಕೆಯಲ್ಲಿ ಸಾಗಿದರು. ಕನ್ನಡವೇ ಅಪಾಯದಲ್ಲಿದ್ದಾಗ ಲಲಿತ ಛಂದೋಲಯದಲ್ಲಿ ಮಹಾಕಾವ್ಯ ಬರೆದು ಬೆಳಗಿದ ಆನಂದ ಎಚ್ಚೆಸ್ವಿಯವರ ತಪಕ್ಕೆ ಸಂದ ಭಾಗ್ಯ.

ರಾಜಕುವರ ಸಿದ್ಧಾರ್ಥನಾದ ಮಾನವ ಜನ್ಮದ ನಶ್ವರತೆಯ ದರ್ಶನ ಸನ್ನಿವೇಶವನ್ನು ಎಚ್.ಎಸ್.ವಿಯವರ ಶಬ್ದ ಶಬ್ದಾವತಾರದಲ್ಲಿ ಗೋಚರಿಸಿದ್ದು ಹೀಗೆ- ಹುಟ್ಟು ಸಾವಿನ ದಮ್ಯ ಚಕ್ರ ತಿರುಗುತ್ತ ಇದೆ) ನಿತ್ಯ ವಿಭ್ರಮದ ಈ 1 ಲೋಕದಲ್ಲಿ ಉತ್ಪತ್ತಿ ವ್ಯಯ ಮುಪ್ಪು ರೋಗಗಳ 1 ಗಾಣ ಕರೆಯುತ್ತ ಇದೆ ಬಡಪಾಯಿ ಜೀವಿಗಳು ಎಂಬಲ್ಲಿಗೆ ಜೀವನ್ಮರಣ ಚಕದ ತಾತ್ವಿಕತೆಯನ್ನು ರೂಪ ಸ್ವರೂಪದಲ್ಲಿ ಚಿತ್ರಿಸಿರುವುದು ಅನನ್ಯ ಬುದ್ಧನಿಗೆ ಕಾಡಿದ ಜರಾಮರಣ ದುಃಖಗಳಿಗೆ ಕಾರಣವನ್ನು ಹುಡುಕಲು ಹೊರಡುವ ಸಂದರ್ಭವನ್ನು ಕಡಿ ನೋಡಿದ್ದು ಹೀಗೆ ಅನಿವಾರ್ಯವೇ ಹಿಡಿದು ಕಾಡುವೀ ಶೋಕಗಳು? ಆಪರಿಹಾರ್ಯವ ದುಃಖ? ಸಂಸಾರದ ಸಾಗರದಿ ಮುಳುಗಿ ಮುಗಿಯದೆ ಬೇರೆ ದಾರಿಯೇ ಇಲ್ಲವೇ? ಎನ್ನುವ ಪ್ರಶ್ನೆಗಳೊಂದಿಗೆ ಮನವ ತಣಿಸುವ ಮದ್ದು ಇದೆಯೋ? ಇದ್ದರೆ ಯಾವ ಎಡೆಯಲ್ಲಿ ಅವಿತುಕೊಂಡಿದೆ? ನಾನು ಶೋಧಿಸುವೆ ಎಂದುಕೊಳ್ಳುತ್ತ ಸಿದ್ಧಾರ್ಥ ಭೋಗ ಸಾಮಾಜ್ಯವನ್ನು ತ್ಯಜಿಸಿಹೊರಡುತ್ತಾನೆ. ಇಲ್ಲಿ ಕವಿಯು ಅವನ ಇಂಗಿತವನ್ನು ಪ್ರಕಟಪಡಿಸಿದ ಪದಗತಿಯು ಹೀಗಿದೆ-ಶಾಂತಿ ಕಲಕುವ ಮನದ ನೆಮ್ಮದಿಯನೀಡಾಡಿ! ಜೀವದೊಳಗಿನ ಕ್ರೌರ್ಯ ಪಾಶವತೆ ಕೆರಳಿಸುವ ಯುದ್ಧ ಮಾರಿಗೆ ಹೇಸಿ ಭೋಗ ಸಾಮ್ರಾಜ್ಯಕ್ಕೆ | ಹೆಂಡತಿಗೆ, ರಾಜ್ಯಾಧಿಕಾರಕ್ಕೆ ಅರಮನೆಗೆ ಹೇಳಿ ಕೊನೆಯ ವಿದಾಯ ಸಂಸಾರ ಬಂಧವನು ಹರಿದು ಹೊರಟವ ನೀನು ಶಾಂತಿಯನ್ನರಸುತ್ತ ಎಂಬಲ್ಲಿಗೆ ಇಡೀ ಕಾವ್ಯವು ಬುದ್ಧ ತತ್ವದ ದಾರ್ಶನಿಕ ಲೋಕೋತ್ತರವಾಗಿ ನಿಲ್ಲುತ್ತದೆ. ಶಾಕ್ಯರು ಮತ್ತು ಕೊಲಿಯರ ನಡುವಿನ ಸಂಘರ್ಷದಿಂದ ಸಿದ್ದಾರ್ಥನ ಮನಸ್ಸು ಕಲಕುತ್ತದೆ. ಕಾವ್ಯದಲ್ಲಿ ಕರುಣಾರಸವು ಹರಿಯುವುದಿಲ್ಲ. ಬುದ್ಧನಾಗಿ ಬಂದ ಮೇಲೆ ರಾಜಗೃಹಕ್ಕೆ ಹೊರಟಾಗ ಗೌತಮಿಯು ತನಗೂ ಬಿಕ್ಕುಪದವಿ ನೀಡೆಂದು ಬೇಡಿಕೊಳ್ಳುತ್ತಾಳೆ, ಅಸ್ತು ಎಂದನು ಬುದ್ಧ ಭಗವಂತ ಶೂನ್ಯವನು ದಿಟ್ಟಿಸುತ ಶರಣಾದರಿಂತು ಆ ತಾಯಿಯರು ಹಾಗೆಯೇ ಬುದ್ಧನ ಪರಮಾಪ್ತಶಿಷ್ಯ ಆನಂದನೂ ಸಾಷ್ಟಾಂಗವೆರಗುವನು ಬುದ್ಧ ಶ್ರೀ ಚರಣಕೆ ಮುಡಿಯನಿರಿಸುತ, ಯಶೋಧರೆ, ತಾಯಿ ಗೌತಮಿ। ಕಣ್ಣಲ್ಲಿಯೇ ತೆರೆದು ತೋರುವರು ಸಂತೃಪ್ತಿ ಎನ್ನುವ ಚರಣಗಳಲ್ಲಿ ಶಾಂತರಸವು ಮೈದೋರುತ್ತದೆ.

ಬುದ್ಧಚರಣ ಮಹಾಕಾವ್ಯವು ಎಚ್ಚೆಸ್ವಿಯವರಿಗೆ ಕೇವಲ ಬರೆಯುವ ತುಡಿತವಾಗಿರಲಿಲ್ಲ. ನಾನಿಲ್ಲಿ ಮಮ್ಮಟನ ಚಿಂತನೆಯನ್ನೇ ಆಶ್ರಯಿಸುತ್ತೇನೆ. ಕಾವ್ಯವು ಯಶಸ್ಸು ಸಾರ್ಥಕ್ಯ ದಿವ್ಯ ಆನಂದ. ರಾಜಲಕ್ಷ್ಮೀ (ಪತ್ನಿ) ಇಹಲೋಕ ತ್ಯಜಿಸಿದಾಗಿನ ವ್ಯಾಕುಲತೆಯಿಂದ ಬಿಡುಗಡೆ ಹೊಂದಲು ಎಚ್ಚೆಸ್ವಿಯವರು ಬುದ್ಧಚರಣಕ್ಕೆ ಶರಣಾದರು ಎಂಬ ಅಂತಃಕರಣದ ಹೊನಲು ನನ್ನದು.

(ಕೃಪೆ : ಪುಸ್ತಕಲೋಕ, ಬರಹ: ಅಶೋಕ ಹಾಸ್ಯಗಾರ)

Related Books