ಬೇರೆ ಕ್ಷೇತ್ರಗಳಲ್ಲಿ ಕಂಡು ಬರುವಂತೆ ಸುಲಭ ಸಂವಹನ ಸಾಧ್ಯಗೊಳಿಸುವ ಸಲುವಾಗಿ ವೈದ್ಯಕೀಯ ಸಿಬ್ಬಂದಿಗಳ ನಡುವೆ ಅಂಗೀಕೃತ ಪದಗಳು ಮತ್ತು ಸಂಕೇತಗಳ ಬಳಕೆ ರೂಢಿಯಲ್ಲಿದೆ. ಆದರೆ ಈ ಸಂಕೇತಗಳ ಮತ್ತು ಪದಗಳ ಬಳಕೆಗಳು ಜನಸಾಮಾನ್ಯರ ಗ್ರಹಿಕೆಗೆ ದಕ್ಕುವುದಿಲ್ಲ. ವೈದ್ಯರು ಹೇಳುವ , ತನಗೆ ಅರ್ಥವಾಗದ ಒಂದೊಂದು ಪದವೂ ರೋಗಿಯಲ್ಲಿ ಭಯದ ಮತ್ತು ಗೊಂದಲದ ವಾತವರಣವನ್ನು ಉಂಟುಮಾಡುತ್ತದೆ. ವೈದ್ಯರಿಗೂ ಅವುಗಳನ್ನು ರೋಗಗಿಳಿಗೆ ಅರ್ಥವಾಗುವಂತೆ ವಿವರಿಸಿ ಹೇಳುವ ಸಮಯವಕಾಶ ಇರುವುದಿಲ್ಲ. ಇಂಥಾ ಸಂದರ್ಭಗಳಲ್ಲಿ ಪದಗಳ ವಿವರಣೆ, ಗಂಭೀರತೆ ಅರ್ಥವಾಗದೆ ಜನಸಾಮಾನ್ಯರು ವೈದ್ಯಕೀಯ ಕ್ಷೇತ್ರವನ್ನು ಭಯದಿಂದ ತಮ್ಮ ಅರಿವಿನ ವ್ಯಾಪ್ತಿಯಿಂದ ದೂರವಿಡುತ್ತಾರೆ. ವೈದ್ಯ ಮತ್ತು ರೋಗಿ ನಡುವೆ ಬಾಂಧವ್ಯ ವೃದ್ಧಿಸುವಲ್ಲಿ ಇದೂ ಒಂದು ಅಡಚಣೆಯಾಗಬಹುದು. ಅದನ್ನು ನಿವಾರಿಸುವ ನಿಟ್ಟಿನಲ್ಲಿ ಉಭಯ ಲೇಖಕರು ವೈದ್ಯಕೀಯ ಕ್ಷೇತ್ರದ ಪಾರಿಭಾಷಿಕ ಪದಗಳ ಅರ್ಥಗಳನ್ನು ಸರಳವಾಗಿ ಸಾಮಾನ್ಯರಿಗೂ ಅರ್ಥವಾಗುವ ಶೈಲಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ.
©2024 Book Brahma Private Limited.