ರಾಮಾಯಣದ ಕತೆ ಪ್ರತಿಯೊಬ್ಬ ಭಾರತೀಯನಿಗೆ ಗೊತ್ತಿದ್ದ ವಿಷಯ. ರಾಮನ ವನವಾಸ, ಸೀತೆಯ ಅಪಹರಣ, ಲಂಕಾದಹನ, ರಾಮರಾವಣರ ಯುದ್ಧ, ರಾಮನೆಂದರೆ ದೇವರು, ರಾವಣನೆಂದರೆ ರಾಕ್ಷಸ, ಸೀತೆ ಎಂದರೆ ಪತಿವ್ರತೆ. ಹನುಮಂತನೆಂದರೆ ಏನು ಬೇಕಾದರೂ ಮಾಡುವ ಶಕ್ತಿ ಇದ್ದವನು ಹೀಗೆ ಹಲವಾರು ಕಲ್ಪನೆಗಳು ಇದ್ದೇ ಇರುತ್ತವೆ.
ಈ ಗ್ರಂಥದಲ್ಲಿ ವಾಲ್ಮೀಕಿ ರಾಮಾಯಣದಲ್ಲಿ ಬರುವ ಶಾಪ ಮತ್ತು ವರಗಳ ಕುರಿತು ಚರ್ಚಿಸಲಾಗಿದೆ. ವಾಲ್ಮೀಕಿ ರಾಮಾಯಣದಲ್ಲಿಯ 61 ಶಾಪಗಳ ಮತ್ತು 82 ವರಗಳ ಬಗ್ಗೆ ಸಂಶೋಧಿತ ವಿವರಣೆಯನ್ನು ಓದುಗರ ಮುಂದಿಟ್ಟಿದ್ದಾರೆ. ಶಾಪ ಮತ್ತು ವರಗಳಿಗೆ ಸಂಬಂಧವಿದ್ದ ವ್ಯಕ್ತಿಗಳ, ಸ್ಥಳಗಳ ಉಲ್ಲೇಖವನ್ನು ಸವಿಸ್ತರವಾಗಿ ಮಾಡಿದ್ದಾರೆ. ಶ್ರೀಪಾದ ರಘುನಾಥ ಬಿಡೆ ಅವರು ರಚಿಸಿದ ಈ ಗ್ರಂಥವನ್ನು ಸರಸ್ವತಿ ಗಜಾನನ ರಿಸಬೂಡ ಅನುವಾದಿಸಿದ್ದಾರೆ.
©2024 Book Brahma Private Limited.