ಶ್ರೀರಾಮಚರಿತಾಮೃತಂ

Author : ದೇರಾಜೆ ಸೀತಾರಾಮಯ್ಯ

Pages 948

₹ 650.00




Year of Publication: 2015
Published by: ಜ್ಞಾನಗಂಗಾ ಪುಸ್ತಕ ಮಳಿಗೆ
Address: ಪುತ್ತೂರು-574201, ದ.ಕ ಜಿಲ್ಲೆ
Phone: 09480451560.

Synopsys

ಹಿರಿಯ ಲೇಖಕ ದೇರಾಜೆ ಸೀತಾರಾಮಯ್ಯ ಅವರ ಕೃತಿ-ಶ್ರೀರಾಮಚರಿತಾಮೃತಂ (ದೇರಾಜೆ ರಾಮಾಯಣ) ಮೂಲ ರಾಮಾಯಣವನ್ನೇ ಕೇಂದ್ರವಾಗಿಟ್ಟುಕೊಂಡು, ಆದರೆ, ಮೂಲ ಚೌಕಟ್ಟು ಮೀರದೇ, ವಿಭಿನ್ನ ದೃಷ್ಟಿಯಿಂದ ಸರಳವಾಗಿ ರಚಿಸಿದ ಕೃತಿ. ಯಕ್ಷಗಾನ ವಲಯದಲ್ಲಿ ದೇರಾಜೆ ರಾಮಾಯಣ ಎಂದೇ ಪ್ರಸಿದ್ಧಿ. 80 ವರ್ಷಗಳ ಹಿಂದೆ ಈ ಕೃತಿಯು ಮೊದಲು ಪ್ರಕಟವಾಗಿತ್ತು.2015 ನವೆಂಬರ್ 12 ರಂದು ದೇರಾಜೆ ಸೀತಾರಾಮಯ್ಯನವರ ಶತಮಾನೋತ್ಸವ ಆಚರಣೆ ಸಂದರ್ಭ ಈ ಕೃತಿ ಮೂರನೇ ಮುದ್ರಣ ಕಂಡಿದೆ. ಭಾಷೆಯು ಸರಳವಾಗಿದೆ. ಮನೋಹರವಾಗಿದೆ. ಉಪಮೆಗಳು ಹೇರಳವಾಗಿವೆ. ಕಥೆಯ ಓಟ, ವಿಮರ್ಶೆ, ಸಂಭಾಷಣೆಯ ಚತುರತೆ ಇಲ್ಲಿಯ ವೈಶಿಷ್ಟ್ಯ.‘ ಶ್ರೀ ರಾಮಚಂದ್ರನ ದಿವ್ಯ ಚರಿತೆಯ ಘಟನೆಗಳನ್ನು ವಾಲ್ಮೀಕಿಯ ಹಿಂದೆ ನಿಂತುಕೊಂಡು ಕಣ್ಣಾರೆ ನೋಡಿರುವಂತೆ ನನಗೆ ಭಾಸವಾಗುತ್ತದೆ. ವಾಸ್ತವಿಕವಾಗಿ ಮನಸ್ಸನ್ನು ಸೆರೆ ಹಿಡಿಯುವಂತ ನಿರೂಪಣೆಗಳು’ ಎಂದು ಹಿರಿಯ ಸಾಹಿತಿ ಡಿ.ವಿ.ಜಿ. ಪ್ರಶಂಸಿಸಿದ್ದಾರೆ. ಇವರ "ಶ್ರೀರಾಮಚರಿತಂ" ಗ್ರಂಥಕ್ಕೆ ಮೈಸೂರು ಸರ್ಕಾರದಿಂದ ಪಾರಿತೋಷಕ ಲಭಿಸಿದೆ. 

About the Author

ದೇರಾಜೆ ಸೀತಾರಾಮಯ್ಯ
(17 November 1914 - 05 October 1984)

ಹಿರಿಯ ಚಿಂತಕ-ಲೇಖಕ-ಪ್ರವಚನಕಾರ-ಯಕ್ಷಗಾನ ಕಲಾವಿದ ದೇರಾಜೆ ಸೀತಾರಾಮಯ್ಯ ಅವರು ದ.ಕ. ಜಿಲ್ಲೆಯ ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದವರು. ಜಮೀನುದಾರರು. ತಂದೆ ಮಂಗಲ್ಪಾಡಿ ಕೃಷ್ಣಯ್ಯ, ತಾಯಿ ಸುಬ್ಬಮ್ಮ. ಯಕ್ತಗಾನ ಕಲಾವಿದರ ಮನೆತನ. ಪ್ರಾಥಮಿಕ ಶಾಲೆಯ ಗುರು ಕೊಟ್ಟೆಕಾಯಿ ನಾರಾಯಣ ರಾಯರ ಕುಮಾರವ್ಯಾಸ ಕುರಿತ ಪಾಠದಿಂದ ಅಭಿನಯ, ಸಾಹಿತ್ಯಾಸಕ್ತಿ ಮೂಡಿತು. ಯಕ್ಷಗಾನ, ತಾಳಮದ್ದಳೆ, ನಾಟಕ, ರಂಗಭೂಮಿಯ ಬಗ್ಗೆ ಸಂಶೋಧನೆ - ವಿಮರ್ಶೆಗಳು ಹೀಗೆ ವೈವಿಧ್ಯಮಯ ಸಾಹಿತ್ಯ ರಚಿಸಿದ್ದು ಇವರ ವೈಶಿಷ್ಟ್ಯ. ಬೆಳ್ಳಾರೆ ಗ್ರಾ.ಪಂ ಅಧ್ಯಕ್ಷರಾಗಿದ್ದರು. ಪುತ್ತೂರು ತಾಲೂಕು ಮಾರುಕಟ್ಟೆ ಸೊಸೈಟಿ ಅಧ್ಯಕ್ಷರು, ದಕ್ಷಿಣ ಕನ್ನಡ ಕೃಷಿಕರ ಮಾರಾಟ ಸಹಕಾರ ಸಂಘದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ಕೃತಿಗಳು: ಭೀಷ್ಮಾರ್ಜುನ ...

READ MORE

Related Books