ಒಂದು ಕಾಲಕ್ಕೆ ಪ್ರಾಕೃತ ಭಾಷೆಯು ಜನಸಾಮಾನ್ಯರ ಮಾತೃ ಭಾಷಾಯಾಗಿತ್ತು. ಪ್ರಾಕೃತದಿಂದ ಸಂಸ್ಕೃತ ಹುಟ್ಟಿತ್ತು ಎಂದು ಕೆಲವರು ವಾದಿಸಿದರೆ ಮತ್ತೆ ಕೆಲವರು ಸಂಸ್ಕೃತದಿಂದ ಪ್ರಾಕೃತ ಹುಟ್ಟಿತ್ತು ಎಂದು ಹೇಳುವವರಿದ್ದಾರೆ. ಎರಡು ವಾದಗಳನ್ನೂ ಪರಿಶೀಲಿಸಿ ಪ್ರಾಚೀನ ಪ್ರಾಕೃತ ಭಾಷೆಯಿಂದ ವೈದಿಕ ಸಂಸ್ಕೃತಿ ಮತ್ತು ಪ್ರಾಕೃತಗಳೆರಡೂ ಹುಟ್ಟಿಕೊಂಡಿರಬೇಕು ಎಂದು ಊಹಿಸುವವರೂ ಇದ್ದಾರಾ. ಕನ್ನಡವೂ ಸಹ ಪ್ರಾಕೃತಿದಿಂದ ಸಾಕಷ್ಟು ಪದಗಳು ಪ್ರಾಕೃತದ ಮೂಲದವು ಇಂತಹ ಪದಗಳ ಸ್ವರೂಪ ಯಾವ ರೀತಿಯಲ್ಲಿತ್ತು ಎಂಬುದನ್ನು ಅರಿಯಲು ಈ ನಿಘಂಟು ಸಹಕಾರಿಯಾಗುತ್ತದೆ. ಹಳಗನ್ನಡದ ಕೆಲವು ಕವಿಗಳು ಪ್ರಾಕೃತದೊಡನೆ ಅನುಸಂಧಾನ ನಡೆಸಿದ್ದಾರೆ.
ಜೈನ ಕಾವ್ಯ ಪುರಾಣಗಳನ್ನು ಅರ್ಥಮಾಡಿಕೊಳ್ಳಲು ಪ್ರಾಕೃತದ ತಿಳುವಳಿಕೆಯ ಅಗತ್ಯ ಸಾಕಷ್ಟಿದೆ. ಪ್ರಸ್ತುತ ಈ ನಿಘಂಟು ಈ ದಿಕ್ಕಿನಲ್ಲಿ ಬಹಳಷ್ಟು ಸಹಕಾರಿಯಾಗುತ್ತದೆ. ಭಾಷಾ ವಿಜ್ಞಾನಿಗಳಿಗೆ, ಸಂಶೋಧಕರಿಗೆ ಅಧ್ಯಾಪಕರಿಗೆ, ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ಈ ನಿಘಂಟನ್ನು ವಿದ್ವಾಂಸರಾದ ಡಾ. ಆರ್. ಲಕ್ಷ್ಮೀನಾರಾಯಣ ಅವರು ಅಪಾರ ತಾಳ್ಮೆ ಮತ್ತು ಪರಿಶ್ರಮದಿಂದ ಸಿದ್ಧಪಡಿಸಿಕೊಟ್ಟಿದ್ದಾರೆ.
©2024 Book Brahma Private Limited.