ಸನಾತನ ಭಾರತೀಯ ಸಂಸ್ಕೃತಿಯನ್ನು ಜಗತ್ತಿಗೆ ಉಣಬಡಿಸಿದ ಶಂಕರಾಚಾರ್ಯರು ಪ್ರಸ್ತಾನತ್ರಯ ಭಾಷ್ಯಗಳನ್ನು ಬರೆದಿದ್ದರು. ಸಂಸ್ಕೃತದಲ್ಲಿದ್ದ ಅವುಗಳನ್ನು ಕನ್ನಡಕ್ಕೆ ತಂದದ್ದು ಸಚ್ಚಿದಾನಂದೇಂದ್ರ ಸರಸ್ವತಿ ಸ್ವಾಮೀಜಿ. ಹಾಗೆ ಕನ್ನಡಕ್ಕೆ ಬಂದ ಭಾಷ್ಯಗಳನ್ನು ಅರ್ಥ ಮಾಡಿಕೊಳ್ಳಲು ಶಬ್ದಕೋಶವೊಂದರ ಅಗತ್ಯವಿತ್ತು. ಅದನ್ನು ಮನಗಂಡ ಕೆಲವು ಸಂಗ್ರಹಕಾರರು ಸ್ವಾಮೀಜಿಯವರ ಕೃತಿಯನ್ನೇ ಆಧರಿಸಿ ಅರ್ಥ ವಿವರಣೆ ನೀಡಿದ್ದಾರೆ. ಅರ್ಥಾತ್ ಪಾರಿಭಾಷಿಕ ಪದಗಳ ಆಯ್ಕೆ ವಿವರಣೆ ಸ್ವಾಮೀಜಿ ಅವರದ್ದೇ ಆಗಿದೆ. ಸ್ವಾಮೀಜಿಯವರು ನಡೆಸುತ್ತಿದ್ದ ಹೊಳೆನರಸೀಪುರದ ಅಧ್ಯಾತ್ಮ ಪ್ರಕಾಶ ಕಾರ್ಯಾಲಯ ಪುಸ್ತಕವನ್ನು ಹೊರತಂದಿದೆ.
ಅನರ್ಥ: - ನೈ, ಸಂಸಾರವು, ಅಜ್ಞಾನದಿಂದಲೇ ಅನರ್ಥ (ಅವ). ಮಿಥ್ಯಾ ಜ್ಞಾನದಿಂದಲೇ ಅನರ್ಥವೆಂಬ ಸಾಂಖ್ಯರ ಮತ ಸರಿಯಲ್ಲ, ೩-೬.
ಅನನು - ಬ್ರ.ಸೂ-೧. ಕಾಲಗಳಲ್ಲಿ ಕೊನೆಗಾಣದೆ ಇರುವ (ಅಧ್ಯಾಸ), ೯ ; ಪರಿಚ್ಛೇದವಿಲ್ಲದ (ಬ್ರಹ), ೧೧೯, ೩೬೬.
ಅನಧಿಕಾರಪ್ರಯೋಜಕಧರ್ಮಾ: - ಈಶ, ಅಧಿಕಾರವಿಲ್ಲದಿರುವದಕ್ಕೆ ಕಾರಣವಾದ ಧರ್ಮಗಳು, ೧.
ಅನಧಿಕೃತಾಃ - ಐತ, ಕರ್ಮಕ್ಕೆ ಅಧಿಕಾರಿಗಳಲ್ಲದ ಕುರುಡರು, ಹೆಳವರು ಮುಂತಾದವರು, ೭, ೨೩.
ಅನಧಿಗತವಸ್ತುಪರಿಚ್ಛೇದಃ, ಅನಧಿಗತಾಧಿಗಮಃ - ನೈ, ತಿಳಿಯದೆ ಇರುವ ವಸ್ತುವನ್ನು ತಿಳಿಸಿಕೊಡುವದು (ಪ್ರಮಾಣ), ೧-೯೧; ಆತನು ಅವಗತಿರೂಪನಾಗಿಯೇ ಇರುವದರಿಂದ ಅವನು ಅನಧಿಗತನಾಗಿದ್ದು ಶಾಸ್ತ್ರವು ಹೊಸದಾಗಿ ತಿಳಿಸಿಕೊಡುವದಿಲ್ಲ, ೨-೧೦೫.
ಅನನ್ವಯಃ - ನೈ, ಅನ್ವಯವಿಲ್ಲದಿರುವದು, ವ್ಯತಿರೇಕ, ೨-೩೨. ಅನನ್ಯಶೇಷಃ - ಬ್ರ.ಸೂ-೧. ಮತ್ತೊಂದಕ್ಕೆ ಅಧೀನವಾಗಿಲ್ಲದ (ಪರಮಾತು,
©2024 Book Brahma Private Limited.