ನುಡಿಗನ್ನಡಿ

Author : ಸಿ.ಬಿ.ಶೈಲಾ ಜಯಕುಮಾರ್

Pages 160

₹ 75.00




Year of Publication: 2010
Published by: ಗೀತಾಂಜಲಿ ಪುಸ್ತಕ ಪ್ರಕಾಶನ
Address: ಶಿವಮೊಗ್ಗ

Synopsys

ನುಡಿಗನ್ನಡಿ ಸಿ.ಬಿ. ಶೈಲಾ ಜಯಕುಮಾರ್‌ ಅವರ ಕೃತಿಯಾಗಿದೆ. ಕ್ಯಾಲೆಂಡರುಗಳಲ್ಲಿ ಮಾಮೂಲಿ ಬರುವಂಥ ತ್ಯಾಗಿಗಳ, ಸಮಾಜ ಸುಧಾರಕರ, ಮಹಾತ್ಮರ ಪುಣ್ಯತಿಥಿ, ಜಯಂತಿ ದಿನಾಚರಣೆ ವಿಷಯಗಳನ್ನೂ ಸೂಕ್ತ ಸ್ವಾರಸ್ಯಕರವಾಗಿ ನಿರೂಪಿಸಿರುವುದು ಅವರ ಶ್ರಮಕ್ಕೆ ತಕ್ಕ ಫಲ ನೀಡಿದೆ. ನಿಷ್ಠೆಯಿಂದ ಮಾಡಿದ ಯಾವುದೇ ಕೆಲಸ ಎಂಥವರಿಗೂ ಇಷ್ಟವಾಗದೇ ಇರದು. ಐವತ್ತರ ಪ್ರಾಯಕ್ಕೆ ಪಾದಾರ್ಪಣೆ ಮಾಡುತ್ತಿರುವ ಈ ಸಂದರ್ಭದಲ್ಲಿ ಹೊರಬರುತ್ತಿರುವ ಸಿ.ಬಿ. ಶೈಲಾ ಅವರ 'ನುಡಿ' ಸಂಗ್ರಹ, ಅವನ್ನು ಕೇಳಲು ಅವಕಾಶ ದೊರಕದಿದ್ದವರಿಗೂ ಓದಲು ದಾರಿ ಮಾಡಿಕೊಡುತ್ತಿರುವುದು ಮತ್ತು ಸವಿಯಲು ದಾರಿ ಮಾಡಿಕೊಡುತ್ತಿರುದು ಒಂದು ಸುಯೋಗವೇ ಸರಿ ಎನ್ನುತ್ತಾರೆ ಮಹೇಶ್ವರಪ್ಪ

About the Author

ಸಿ.ಬಿ.ಶೈಲಾ ಜಯಕುಮಾರ್

ಸಿ.ಬಿ.ಶೈಲಾ ಜಯಕುಮಾರ್ ಅವರು ಮೂಲತಃ ಚಿತ್ರದುರ್ಗದವರು. MA (English) M Ed , Diploma in Journalism ನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ಆಂಗ್ಲ ಭಾಷಾ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸಿದ ಅವರು ಜೂನ್‌ 2020 ರಲ್ಲಿ ನಿವೃತ್ತಿ ಹೊಂದಿದರು. ಚಿತ್ರದುರ್ಗದ ಲೇಖಕಿಯರ ಕಥಾಸಂಕಲನದ 'ಮೊದಲ ಹೆಜ್ಜೆ' ಕೃತಿಯ ಸಂಪಾದಕಿ ಆಗಿ ಕಾರ್ಯನಿರ್ವಹಿಸಿದ್ದಾರೆ. ಕೃತಿಗಳು : ನುಡಿಗನ್ನಡಿ (ಆಕಾಶವಾಣಿಯ ನಲ್ನುಡಿಗಳ ಸಂಕಲನ), ಅಹಲ್ಯಾಂತರಂಗ, ಏಕಸೂತ್ರದಲ್ಲಿ ಅನೇಕ (ವೈಚಾರಿಕ ಲೇಖನಗಳ ಸಂಕಲನ) , ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರ ಬಗ್ಗೆ ರಸಪ್ರಶ್ನೆಗಳು, ಉತ್ತರೆಯ ಸ್ವಗತ, ಇವರು ಚಿರಂಜೀವಿಗಳು.(ಪುರಾಣಗಳ ಚಿರಾಯುಗಳ ಬಗ್ಗೆ), ಅಂತಃಕರಣದ ...

READ MORE

Related Books