ಭಾಷಾ ಅಧ್ಯಯನದ ಒಂದು ಪ್ರಮುಖ ವಲಯವಾದ ನಿಘಂಟು ವಿಜ್ಞಾನ ಹಾಗೂ ನಿಘಂಟು ರಚನಾ ವಿಜ್ಞಾನಗಳನ್ನು ಶಾಸ್ತ್ರೀಯವಾಗಿ ವಿವೇಚಿಸುವ ಕೃತಿ ಇದಾಗಿದ್ದು , ನಿಘಂಟು ರಚನೆಯ ತಾತ್ವಿಕ ಶೋಧನೆ ಮತ್ತು ನಿಘಂಟು ರಚನೆಯ ಆನ್ವಯಿಕ ನೆಲೆಗಳ ವಿವೇಚನೆಯ ಪ್ರಯತ್ನ ಇಲ್ಲಿದೆ. ನಿಘಂಟು, ಶಬ್ದಕ್ಕೆ ಅರ್ಥ ತಿಳಿಸುವ ಜ್ಞಾನ ಶಾಖೆಯಷ್ಟೇ ಆಗಿರದ ಕಾಲದಿಂದ ಕಾಲಕ್ಕೆ ಒಂದು ಪ್ರದೇಶದ ಸಂಸ್ಕೃತಿ ಹಾಗೂ ಸಾಮಾಜಿಕ ಒತ್ತಡಗಳನ್ನು ದಾಖಲಿಸುವ ಕೃತಿಯೂ ಆಗಿರುವುದು ಸಾಧ್ಯ ಎನ್ನುವುದನ್ನು ಈ ಪುಸ್ತಕ ಸಾದ್ಯವಾಗಿಸಿದೆ. ಈ ಕೃತಿಯಲ್ಲಿರುವ ಅಧ್ಯಾಯಗಳೆಂದರೆ: ನಿಘಂಟು ವಿಜ್ಞಾನ ,ನಿಘಂಟು ರಚನೆ ,ಕನ್ನಡ ನಿಘಂಟುಗಳ ಬೆಳವಣಿಗೆ ,ವೃತ್ತಿ ಪದಕೋಶಗಳ : ಸಂಕ್ಷಿಪ್ತ ಚರಿತ್ರ ,ಪ್ರಾಯೋಗಿಕ ಪ್ರಶ್ನಾವಳಿಗಳು ,ವೃತ್ತಿ ಪದಕೋಶ ,ಸ್ವರೂಪ ಮತ್ತು ರಚನೆ
©2025 Book Brahma Private Limited.