12ನೇ ಶತಮಾನದ ಆದಿಭಾಗದಲ್ಲಿದ್ದ ಕವಿ ನಯಸೇನ. ಕನ್ನಡದ ಕವಿರತ್ನತ್ರಯರಾದ ಪಂಪ-ಪೊನ್ನ-ರನ್ನರಂತೆ ತೀರ್ಥಂಕರ ಪುರಾಣರಚನೆಯ ಮಾರ್ಗ ಅನುಸರಿಸದೇ ತಮ್ಮದೇ ಹೊಸ ಶೈಲಿಯಲ್ಲಿ ಆತ ರಚಿಸಿದ ಮಹತ್ವದ ಕೃತಿ- ಧರ್ಮಾಮೃತ. ಇದೊಂದು ವಿಡಂಬನನಾತ್ಮಕ ಕಾವ್ಯ, ಪರಧರ್ಮ, ಪರಮತವನ್ನು ಮಾತ್ರವಲ್ಲದೇ ತನ್ನ ಮತೀಯರನ್ನೂ ವಿಡಂಬನೆ ಮಾಡಿರುವ ಈ ವಿಶಿಷ್ಟ ಕೃತಿಯ ಕುರಿತಾಗಿ ಲೇಖಕ ಪಿ.ವಿ. ನಾರಾಯಣ ಅವರು ವಿವರಿಸಿದ್ದಾರೆ.
©2024 Book Brahma Private Limited.