"ಆಡಳಿತವೆಲ್ಲ ಕನ್ನಡದಲ್ಲೇ ಎಲ್ಲಾ" ನಡೆಯಬೇಕು ಎಂಬುದು ಸರಕಾರದ ಘೋಷಣೆ ಹಾಗೂ ನಮ್ಮ ಆಶಯವೂ ಹೌದು. ಆದರೆ, ನಮ್ಮ ಪದಪುಂಜದಲ್ಲಿ ದೊರಕುವ ಪದಕೋಶಗಳೆಷ್ಟು? ಇಂಗ್ಲಿಷ್ - ಕನ್ನಡ ಪದಕೋಶಗಳು ಹಲವಿದ್ದರೂ ಕನ್ನಡ - ಇಂಗ್ಲಿಷ್ ಪದಕೋಶ ಇದೇ ಮೊದಲನೆಯದ್ದು ಎನ್ನಬಹುದು.
ಈ ಪದಕೋಶದಲ್ಲಿ ಸುಮಾರು 12,900 ಮೂಲ ಪದಗಳು ಮತ್ತು ಅವುಗಳಿಗೆ ಸಮಾನಾರ್ಥಕವಾಗಿ 21,500 ಸಂವಾದಿ ಪದಗಳು ಇವೆ. ಕೊನೆಯಲ್ಲಿ ಇಂಗ್ಲಿಷ್ ಪದಗಳ ಸೂಚಿ ಕೊಡಲಾಗಿದೆ. ಇದರಲ್ಲಿ, ಪ್ರಮುಖವಾಗಿ ಬಳಕೆಯಾಗುವ ಸುಮಾರು 1800 ಇಂಗ್ಲಿಷ್ ಆಡಳಿತ ಪದಗಳನ್ನು ಪಟ್ಟಿ ಮಾಡಲಾಗಿದೆ. ಪದಕೋಶದ ನಂತರ ನಾಲ್ಕು ಪರಿವಿಡಿಗಳಿವೆ. ಅವುಗಳಲ್ಲಿ ಕನ್ನಡ-ಇಂಗ್ಲಿಷ್‌ನಲ್ಲಿ 439 ಪದನಾಮಗಳು, 370 ಇಲಾಖೆ ನಿರ್ದೇಶನಾಲಯ, ನಿಗಮ, ಇತ್ಯಾದಿಗಳ ಹೆಸರುಗಳು ಮತ್ತು 644 ಪ್ರಮುಖ ಕೇಂದ್ರ/ರಾಜ್ಯ ಅಧಿನಿಯಮಗಳ ಹೆಸರುಗಳನ್ನು ಕೊಡಲಾಗಿದೆ. ಆಡಳಿತದಲ್ಲಿ ಕನ್ನಡ ಬಳಕೆಯಲ್ಲಿ ತೊಡಗುವ, ತೊಡಗಿರುವ ಸರ್ಕಾರಿ ನೌಕರರಿಗೆ, ಕನ್ನಡ ಕಲಿಯುವ ಕನ್ನಡೇತರರಿಗೆ, ಉದ್ದಿಮೆದಾರರಿಗೆ, ಸಾರ್ವಜನಿಕರಿಗೆ, ಅನುವಾದಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಈ ಕೃತಿ ಅತ್ಯಮೂಲ್ಯ.
©2024 Book Brahma Private Limited.