ಕನ್ನಡ ಸಾಹಿತ್ಯದ 19ನೇ ಶತಮಾನದ ಕೊನೆಗಾಲದ ಪ್ರಸಿದ್ಧ ಕವಿ ಮುದ್ಧಣ. ಇವನ ಕಾವ್ಯಗಳನ್ನು ತಿಳಿಯಬೇಕಾದರೆ ಕವಿಯ ಶಬ್ಧ ಪ್ರಯೋಗದ ಬಗ್ಗೆ ಅರಿಯುವುದು ಅಗತ್ಯವಾಗುತ್ತದೆ.
ಶಬ್ದಗಳಲ್ಲಿ ಕವಿ ತನಗೂ ತನ್ನ ಸಮಕಾಲೀನರಿಗೂ ಮುಂದಿನ ತಲೆಮಾರಿನವರಿಗೂ ಸಂಬಂಧವನ್ನು ಕಲ್ಪಿಸುವ ತಂತ್ರವನ್ನು ಮಾಡಿ, ಶಬ್ದಗಳ ಚರಿತ್ರೆಯನ್ನು ಇನ್ನಷ್ಟು ಅರಿಯಲು ಅವಕಾಶ ನೀಡುತ್ತಾನೆ. ಅದೇ ರೀತಿಯಲ್ಲಿ ಹೊಸಗನ್ನಡ ಸಾಹಿತ್ಯದ ಮುಂಗೋಳಿ ಮುದ್ದಣನ ಶಬ್ದ ಭಂಡಾರವನ್ನು ಈ ಪುಸ್ತಕದ ಮೂಲಕ ತಿಳಿಯುವುದು ಅವಶ್ಯಕವಾಗಿದೆ.
ಪ್ರಸ್ತುತ ಈ ಪುಸ್ತಕದಲ್ಲಿ ಮುದ್ದಣನು ಉಪಯೋಗಿಸಿರುವ ಶಬ್ದಗಳಿಗೆ ಅವನ ಗ್ರಂಥಗಳಲ್ಲಿ ಕಂಡುಬರುವ ಅರ್ಥಗಳನ್ನು ’ಮುದ್ದಣ ಪದಪ್ರಯೋಗ ಕೋಶ’ ಪುಸ್ತಕದಲ್ಲಿ ನಾಡೋಜ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರು ಪ್ರಕಟಿಸಿದ್ದಾರೆ.
©2024 Book Brahma Private Limited.