ಮಾನವೀಯತೆಯ ಕವಿತೆಗಳು ಇಲ್ಲಿ ಪ್ರಧಾನವಾಗಿವೆ. ಮತ್ತೆ ಮತ್ತೆ ಕಾಡುವ ಕವಿತೆಗಳನ್ನು ಕವಿ ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ‘ಮತ್ತೆ ಮತ್ತೆ ಹೇಗೆ ಹಾಡಲಿ’ ಕವನ ಸಂಕಲನವು ಓದುಗರಿಗೆ ನೀಡುತ್ತದೆ. ನಲವತ್ತು ಕವಿತೆಗಳ ಗುಚ್ಛವನ್ನು ಈ ಕೃತಿಯು ಒಳಗೊಂಡಿದೆ. ಕವಿತೆಗಳಲ್ಲಿ ಬಳಕೆಯಾಗಿರುವ ಪದಗಳು, ಹರಿ ಬಿಟ್ಟಿರುವ ಭಾವನೆಗಳು ಎದೆಯನ್ನು ನಾಟುತ್ತವೆ. ಇಲ್ಲಿನ ಕವಿತೆಗಳು ಒಂದೊಂದು ಕವಿತೆಗಳು ಮತ್ತೊಂದು ಕವಿತೆಯೊಂದಿಗೆ ಪೈಪೋಟಿಗೆ ನಿಲ್ಲುವಂತೆ ಪ್ರಬುದ್ಧವಾಗಿವೆ. ಬಹುಮುಖ್ಯವಾಗಿ ಕವನ ಸಂಕಲನದೊಳಗಿನ ಕವಿತೆಗಳು ಕವಿಯ ಕವಿತೆಗಳಲ್ಲ; ಓದುಗನ ಆಪ್ತ ಕವಿತೆಗಳು. ಕವನ ಸಂಕಲನದೊಳಗಿನ ಪ್ರತೀ ಕವಿತೆ ಹದಬೆರೆತ ಕವಿತೆ. ಇಲ್ಲಿರುವುದು ಓದಿ ಇತರರ ಕಿವಿಗೂ ಉಸುರಬಹುದಾದ ಕವಿತೆಗಳು. ಪದೇಪದೇ ಧೇನಿಸುವಂತೆ ಮಾಡುವ ಕವಿತೆಗಳನ್ನು ಈ ಕವನಸಂಕಲನವು ಒಳಗೊಂಡಿದೆ.
©2024 Book Brahma Private Limited.