ಮಾರ್ಕ್ಸ್ವಾದ ಒಂದು ಸಮಗ್ರ ವಿಶ್ವದೃಷ್ಟಿ. 19 ನೇಯ ಶತಮಾನದ ಮೂರು ಪ್ರಧಾನ ಸೈದ್ಧಾಂತಿಕ ವಿಚಾರಧಾರೆಗಳಾದ ಜರ್ಮನಿಯ ತತ್ವಶಾಸ್ತ್ರ, ಇಂಗ್ಲೆಂಡಿನ ರಾಜಕೀಯ ಅರ್ಥಶಾಸ್ತ್ರ ಮತ್ತು ಫ್ರಾನ್ಸಿನ ಸಮಾಜವಾದಿ ಚಿಂತನೆ ಇದನ್ನು ಮಾಕ್ರ್ಸ್ ಗಾಢವಾಗಿ ಅಭ್ಯಾಸ ಮಾಡಿ ಮತ್ತು ವಿಮರ್ಶಿಸಿ ಇವುಗಳ ಆಧಾರದ ಮೇಲೆ ತನ್ನ ಸಿದ್ಧಾಂತವನ್ನು ರಚಿಸಿದ. ವರ್ಗ ಹೋರಾಟದ ಅನುಭವವನ್ನೆಲ್ಲ ಒಂದುಗೂಡಿಸಿ ಅದರ ಆಧಾರದ ಮೇಲೆ ಹೊಸ ಸಮಾಜದ ರೂಪುರೇಷೆಗಳನ್ನು ನಿರೂಪಿಸಿದ.
ಈ ದೃಷ್ಟಿಯಿಂದ ಆಧುನಿಕ ಯುಗದಲ್ಲಿ ಮಾರ್ಕ್ಸ್ವಾದಕ್ಕೆ ಮತ್ತು ಮಾರ್ಕ್ಸ್ವಾದಿ ವಿಮರ್ಶೆಗೆ ಅದರದ್ದೇ ಆದ ಪ್ರಸ್ತುತತೆಯಿದೆ. ಮಾರ್ಕ್ಸ್ವಾದದಲ್ಲಿ ಏನಿದ್ದರೂ ಆರ್ಥಿಕ ಪ್ರಶ್ನೆಗಳು ಮುಖ್ಯ. ಅದು ಉತ್ಪಾದನೆಗಳ ಸಂಬಂಧಗಳ ಕುರಿತು ಮಾತ್ರ ಮಾತಾಡುತ್ತದೆ.
ಮಾರ್ಕ್ಸ್ವಾದದಲ್ಲಿ ಮೇಲುವರ್ಗ, ಬಂಡವಾಳವಾದ, ಈ ತರಹದ ಪದಗಳು ಮಾತ್ರವೇ ಮುಖ್ಯವಾಗಿದೆ. ಹೀಗಾಗಿ ಮಾರ್ಕ್ಸ್ವಾದದ ಹಿನ್ನೆಲೆಯಲ್ಲಿ ಲೇಖಕ ಕೇಶವಶರ್ಮ ಕೆ. ಅವರು ಪ್ರಸ್ತಾಪಿಸಿರುವ ಆಧುನಿಕತಾವಾದ ಮತ್ತು ಮಾರ್ಕ್ಸ್ವಾದ, ಉದಾರವಾದಿ ಮಾನವತಾವಾದ ಮತ್ತು ಮಾರ್ಕ್ಸ್ವಾದಿ ವಿಮರ್ಶೆ, ನಿರಚನವಾದ, ಬಂಡವಾಳಶಾಹಿ ಉತ್ಪಾದನೆ ಮತ್ತು ಪುರುಷಕೇಂದ್ರಿತ ಚಿಂತನೆ, ವಿಭಿನ್ನ ದೃಷ್ಟಿಕೋನಗಳನ್ನು ಚರ್ಚಿಸುವ ಕೃತಿ ’ಮಾರ್ಕ್ಸ್ವಾದಿ ಪರಿಕಲ್ಪನೆಗಳು’.
©2025 Book Brahma Private Limited.