ಹಿರಿಯ ಸಾಹಿತಿ ಡಾ. ಅ.ರಾ. ಮಿತ್ರ ಅವರು ಮಹಾಭಾರತದ ಪಾತ್ರ ಸಂಗತಿಗಳ ಕುರಿತಂತೆ ವಿಶ್ಲೇಷಿಸಿದ ಕೃತಿ ಇದು. ಅಸಂಖ್ಯ ಪಾತ್ರಗಳು ಹಾಗೂ ಸಂಗತಿಗಳನ್ನು ಒಳಗೊಂಡ ಮಹಾಭಾರತವು ವಿಶೇಷತೆಗಳಿಂದ ಕೂಡಿವೆ. ಪ್ರತಿ ಪಾತ್ರವು, ಸಂಗತಿಯು ಬದುಕಿನ ಎಲ್ಲ ಮಗ್ಗಲುಗಳನ್ನು ಸ್ಪರ್ಶಿಸುತ್ತದೆ ಮತ್ತು ಬದುಕಿನ ಸಮಗ್ರತೆಯನ್ನು ಕಟ್ಟಿಕೊಡುತ್ತವೆ. ಇಂತಹ ಕೃತಿಗಳು ಬಂದಿವೆಯಾದರೂ ಸಾಹಿತಿ ಅ.ರಾ.ಮಿತ್ರ ಅವರ ವಿಶಿಷ್ಟ ದೃಷ್ಟಿಕೋನದೊಂದಿಗೆ ಇವರ ಬರಹಗಳು ವಿಭಿನ್ನತೆಯನ್ನು ಮೆರೆಯುತ್ತವೆ.
‘ಜಗತ್ತಿನಲ್ಲಿ ಇರುವುದೆಲ್ಲವೂ ಮಹಾಭಾರತದಲ್ಲಿದೆ. ಮಹಾಭಾರತದಲ್ಲಿ ಇಲ್ಲದ್ದು ಜಗತ್ತಿನಲ್ಲಿಲ್ಲ...’ ಎಂಬಂತೆ ಕಾಲಾನುಕಾಲದಲ್ಲಿ ನಿರಂತರವಾಗಿ ಬೆಳೆದು ನಿಂತಿರುವ ಮಹಾಭಾರತದ ಅಸಂಖ್ಯ ಪಾತ್ರ-ಪ್ರಸಂಗಗಳ ವಿವರ ಈ ಕೃತಿಯಲ್ಲಿದೆ. ವಿಖ್ಯಾತ ವಿದ್ವಾಂಸ ಪ್ರೊ.ಅ.ರಾ. ಮಿತ್ರ ಅವರು ಮುಖ್ಯು ಪಾತ್ರಗಳನ್ನು ಕೈಬಿಟ್ಟು ಸಾಮಾನ್ಯ ಪಾತ್ರಗಳನ್ನು ಪರಿಚಯಿಸುವ ಸಾಹಸದ ಕೆಲಸವನ್ನು ಇಲ್ಲಿ ಮಾಡಿದ್ದಾರೆ. ಈ ಎಲ್ಲ ಉಪ ಪಾತ್ರಗಳ ಸಂಗತಿ ಮತ್ತು ಪೂರ್ವಾಪರಗಳನ್ನು ಗಮನಿಸುತ್ತಾ ಹೋದಂತೆ ಓದುಗರಿಗೆ ವ್ಯಾಸಭಾರತದ ಸ್ಥೂಲ ಕಥೆಯ ಪರಿಚಯವೇ ಆಗಿಬಿಡುತ್ತದೆ. ಆ ಹಿನ್ನೆಲೆಯಲ್ಲಿ , ಅವರು ಕೊಡುವ ವಿಪುಲ, ವಿಶಿಷ್ಟ ಮಾಹಿತಿ ಸಾಹಿತ್ಯಾಸಕ್ತರಿಗೆ, ಸಂಸ್ಕೃತಿ ಚಿಂತಕರಿಗೆ, ಸಂಶೋಧಕರಿಗೆ ನೆರವಾಗುತ್ತದೆ. ಜನರು, ರಾಜರು, ಋಷಿಗಳ ಜೊತೆಗೆ ಪ್ರಾಣಿಕಥೆ, ಭಾರತದ ನದಿಗಳು, ಸಪ್ತಸಾಗರ, ಸ್ಥಳ ಐತಿಹ್ಯ ಇತ್ಯಾದಿ ಲೇಖಕರು ಪರಿಚಯಿಸಿದ್ದಾರೆ. ಹೀಗಾಗಿ ಮಹಾಭಾರತದ ವಿಸ್ತೃತ ಪಾತ್ರಪ್ರಪಂಚ ಕುರಿತಂತೆ ಇದೊಂದು ವಿಶ್ವಕೋಶವೇ ಆಗಿದೆ.
©2024 Book Brahma Private Limited.