ಭಾರತೀಯ ಮಹಾಕಾವ್ಯಗಳ ಪೈಕಿ ಮಹಾಭಾರತ ಅದ್ವಿತೀಯ ಕೃತಿ. ವಿಶೇಷವಾಗಿ ಭಗವದ್ಗೀತೆ ಕುರಿತು ಬಂದ ವ್ಯಾಖ್ಯಾನ ಕೃತಿಗಳು ಜಗತ್ತಿನ ಯಾವ ಕೃತಿಗಳಿಗೂ ಬಂದಿಲ್ಲ ಎಂಬುದು ಅತಿಶಯೋಕ್ತಿಯಲ್ಲ. ಮನುಷ್ಯರ ಮನೋವ್ಯಾಪಾರವನ್ನು ಚಿತ್ರಿಸುವ ಬೃಹತ್ ಕಥೆ-ಮಹಾಭಾರತ. ಭರತೀಯ ಸಂಸ್ಕೃತಿಯ ಬಹುತೇಕ ಜೀವನ ಅಂಶಗಳು, ಮೌಲ್ಯಗಳು, ರೀತಿ-ನೀತಿಗಳು ಈ ಮಹಾಕಾವ್ಯವನ್ನೇ ಆಧರಿಸಿವೆ. ಅಹಂಕಾರದಿಂದ ಹೇಗೆ ಸಹೋದರ ಮನೆತನಗಳು ಕಾದಾಡಿ ಹಾಳಾದವು ಮಾತ್ರವಲ್ಲ 18 ಅಕ್ಷೋಹಿಣಿ ಸೈನ್ಯವನ್ನೂ ಸಹ ಬಲಿ ಪಡೆದಿದ್ದು ಮಹಾಭಾರತ ಯುದ್ಧದ ಕಥೆ ಉತ್ತಮ ಸಂದೇಶ ನೀಡುತ್ತದೆ. ಕೇವಲ 40 ಪುಟದ ಈ ಕಿರು ಹೊತ್ತಗೆಯು 1 ಲಕ್ಷ ಶ್ಲೋಕದ ಸಾರವನ್ನು ನೀಡಿದ್ದು, ಕನ್ನಡಿಯಲ್ಲಿ ಆನೆಯನ್ನು ತೋರಿಸಿರುವ ಕಲೆ ಸಿದ್ಧಿಸಿರುವುದನ್ನು ಕಾಣಬಹುದು.
ಈ ಭಗವದ್ಗೀತೆಯು ಬದುಕನ್ನು ಹೇಗೆ ಬಾಳಬೇಕು, ಬದುಕಿನ ವಾಸ್ತವತೆಗೂ ಬದುಕಿನ ಆದರ್ಶಕತೆಗೂ ಇರುವ ವ್ಯತ್ಯಾಸ ಮಾತ್ರವಲ್ಲ; ಯಾವುದನ್ನು ಎಷ್ಟು ಬಳಸಬೇಕು, ಯಾವಾಗ ಬಳಸಬೇಕು ಎಂಬ ಜ್ಞಾನವನ್ನು, ಬದುಕುವ ಕಲೆಯನ್ನು ತಿಳಿಸುತ್ತದೆ. ಇಂತಹ ಕೃತಿಯನ್ನು ಸರಳವಾಗಿ ಬರೆಯುವುದೆಂದರೆ ಸಾಹಸವೇ ಸರಿ. ಅದನ್ನು ಡಾ. ಕೆ. ಕೃಷ್ಣಮೂರ್ತಿ ಅವರು ತೋರಿದ್ದು, ಈ ಕೃತಿಯು ಕನ್ನಡಿಗರಿಗೆ ದಕ್ಕಿದ್ದು ಹೆಮ್ಮೆಯ ಸಂಗತಿಯೇ ಆಗಿದೆ.
©2024 Book Brahma Private Limited.