ಲೂಯಿ ದಿ ಕಮೋಯಿಶ್ ಅವರು ಬರೆದ ‘ಲೂಸಿಯೇಡ್ಸ್ ’-ಪೋರ್ತುಗೀಸ್ ರ ಮಹಾಕಾವ್ಯವನ್ನು ಡಾ. ಬಸವರಾಜ ನಾಯ್ಕರ ಅವರು ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಓರಿಯೆಂಟಲ್ ದೇಶಗಳಿಗೆ ವಿಶೇಷವಾಗಿ ಭಾರತಕ್ಕೆ ಜಲ ಮಾರ್ಗವನ್ನು ಕಂಡು ಹಿಡಿದ ವಾಸ್ಕೊ-ಡಿ-ಗಾಮಾ ಅವರ ಸಾಹಸಮಯ ಚಿತ್ರಣವನ್ನು ಕಟ್ಟಿಕೊಡುತ್ತದೆ.
ಜಲ ಮಾರ್ಗ ಶೋಧನೆಯಲ್ಲಿದ್ದ (16 ನೇ ಶತಮಾನ) ವಾಸ್ಕೊ-ಡಿ.ಗಾಮಾ ಅನುಭವಿಸಿದ ಅನಿರೀಕ್ಷಿತ ಸಂಕಷ್ಟಗಳನ್ನು ವಿವರಿಸಿದ್ದು, ಈ ಜಲಮಾರ್ಗದ ಮೂಲಕವೇ ಪೋರ್ತುಗೀಸ್ ರು ಭಾರತಕ್ಕೆ ಬಂದು ಇಲ್ಲಿ ತಮ್ಮ ವಸಾಹತುಗಳನ್ನು ಸ್ಥಾಪಿಸುವ ಮೂಲಕ ವ್ಯಾಪಾರವನ್ನು ಅಭಿವೃದ್ಧಿಪಡಿಸಿಕೊಂಡರು. ಪೋರ್ತುಗೀಸ್ ರ ವ್ಯಾಪಾರ ಮನೋವೃತ್ತಿಯನ್ನು ಹಾಗೂ ಅವರ ಸಾಮ್ರಾಜ್ಯಶಾಹಿ ಧೋರಣೆಯನ್ನು ಸಹ ತೋರುತ್ತದೆ.
ಐತಿಹಾಸಿಕ ಸತ್ಯಗಳೊಂದಿಗೆ ವ್ಯಾಪಾರಿ ಮನೋವೃತ್ತಿಯ ದೇಶವೊಂದರ ಚಾಣಾಕ್ಷತನದ ತೀವ್ರತೆಯನ್ನೂ ಕಾಣಬಹುದು. ಲೇಖಕರ ಅನುವಾದ ಶೈಲಿಯು ಓದುಗರನ್ನು ಸೆಳೆಯುತ್ತದೆ.
©2024 Book Brahma Private Limited.