ವಂಶಪಾರಂಪರ್ಯವಾಗಿ ಬೆಳೆದು ಬಂದ ಗ್ರಾಮೀಣ ಕುಲವೃತ್ತಿಗಳು ಆಧುನಿಕ ತಂತ್ರಜ್ಞಾನ ಹಾಗೂ ಜಾಗತೀಕರಣದ ಒತ್ತಡಕ್ಕೆ ಸಿಲುಕಿ ತಮ್ಮ ಅಸ್ಥಿತ್ವವನ್ನೇ ಕಳೆದುಕೊಳ್ಳುತ್ತಿವೆ. ಕುಲಕಸುಬನ್ನು ಅವಲಂಬಿಸಿ ನೆಮ್ಮದಿಯಿಂದ ಬದುಕನ್ನು ಸಾಗಿಸುತ್ತಿದ್ದ ಕರಕುಶಲ ವೃತ್ತಿ ಜೀವಿಗಳ ಬದುಕು ನಂದಿ ಹೋಗಿರುವುದು ಮರೆಯಲಾಗದ ಕಹಿ ಇತಿಹಾಸ. ಅವರ ಬದುಕಿನ ಪರಧಿಯ ಸುತ್ತ ಉಪಭಾಷೆ ಗಳಂತೆ ಬೆಳೆದು ಬಂದ ವೃತ್ತಿಪದಗಳು ಕೂಡ ಹೇಳ ಹೆಸರಿಲ್ಲದಂತಾಗುತ್ತಿವೆ. ಭಾಷಾಶಾಸ್ತ್ರಕ್ಕೆ ಇದೊಂದು ದೊಡ್ಡ ಆಘಾತ ಈ ಸಂದರ್ಭದಲ್ಲಿ ಬಸವರಾಜ ಕುಂಚೂರವರು ರಚಿಸಿದ 'ಕುಂಬಾರಿಕೆ ವೃತ್ತಿ ಪದಕೋಶ' ಕುಂಬಾರಿಕೆ ಪ್ರಪಂಚವನ್ನು ಅರಿಯಲು ಉಪಯುಕ್ತ ಗ್ರಂಥ.
©2025 Book Brahma Private Limited.