ಪ್ರೊ. ಜಿ. ವೆಂಕಟಸುಬ್ಬಯ್ಯ ಅವರು ಬರೆದ ಕೃತಿ-‘ಕುಮಾರವ್ಯಾಸನ ಅಂತರಂಗ; ಯುದ್ಧ ಪಂಚಕದಲ್ಲಿ’. ಪಂಪ ಬರೆದ ಕುಮಾರ ವ್ಯಾಸನ ಮಹಾಭಾರತದ ಯುದ್ಧದ ವರ್ಣನೆಯ ಪ್ರಸಂಗಗಳು ಇಲ್ಲಿವೆ. ಕುಮಾರವ್ಯಾಸ ಭಾರತದ ಕೊನೆಯ ಐದು ಪರ್ವಗಳನ್ನು ತೆಗೆದುಕೊಂಡು ‘ಯುದ್ಧಪಂಚಕ’ವೆಂದು ಹೆಸರಿಸಿ ಸರಳ ಅರ್ಥಗಳಲ್ಲಿ ವಿವರಿಸಿದ್ದು ಇಲ್ಲಿಯ ವೈಶಿಷ್ಟ್ಯ. ಮಹಾಭಾರತದ ಯುದ್ಧಕ್ಕೆ ಕಾರಣವಾಗುವ ಪ್ರಸಂಗಗಳನ್ನು ಉದ್ಯೋಗಪರ್ವ ಮತ್ತು ವಿರಾಟಪರ್ವಗಳ ವ್ಯಾಖ್ಯಾನದ ಮೂಲಕ ಯುದ್ಧಪಂಚಕದ ಪೂರ್ವರಂಗದಲ್ಲಿ ವಿವರಿಸಿದ್ದಾರೆ. ಯುದ್ದಪಂಚಕದಲ್ಲಿ ಮೊದಲೆನೆಯ ಪರ್ವವೇ -ಭೀಷ್ಮಪರ್ವ. ಮಹಾಭಾರತ ಕಾವ್ಯದ ಮೂಲಕ ಕಥೆಯನ್ನು ತುಂಬಾ ಪರಿಣಾಮಕಾರಿಯಾಗಿ ವಿವರಿಸುವಲ್ಲಿ ಈ ಕೃತಿಯು ಯಶಸ್ವಿಯಾಗಿದೆ.
©2024 Book Brahma Private Limited.