ಕೃಷಿ ಇಂಜಿನಿಯರಿಂಗ್‌ ಪಾರಿಭಾಷಿಕ ಶಬ್ದಕೋಶ

Author : ಶಾಂತಾರಾಮ ಪ್ರಭು

Pages 88

₹ 54.00




Year of Publication: 2001
Published by: ಕನ್ನಡ ಅಧ್ಯಯನ ವಿಭಾಗ, ಕೃಷಿವಿಶ್ವವಿದ್ಯಾಲಯ
Address: ಕನ್ನಡ ಅಧ್ಯಯನ ವಿಭಾಗ, ಕೃಷಿವಿಶ್ವವಿದ್ಯಾಲಯ ಜಿ.ಕೆ.ವಿ.ಕೆ., ಬೆಂಗಳೂರು 560065
Phone: 080-2333 0153

Synopsys

ಕೃಷಿ ಉತ್ಪಾದನೆ ಮತ್ತು ಪ್ರಕ್ರಿಯೆಯನ್ನು ಅಧ್ಯಯನ ಮಾಡುವ ಇಂಜಿನಿಯರಿಂಗ್‌ ಜ್ಞಾನಶಿಸ್ತು ಕೃಷಿ ಎಂಜಿನಿಯರಿಂಗ್‌. ಉಳಿದ ಎಂಜಿನಿಯರಿಂಗ್‌ ಶಾಖೆಗಳಂತೆ ಅಲ್ಲದೆ ಇದು ನೆಲಮೂಲ ಅನ್ನಿಸುವ ಕೃಷಿ ಸಂಸ್ಕೃತಿಯೊಂದಿಗೆ ಬೆರೆತಿದೆ. ಇತ್ತ ಕೃಷಿ ಸಮುದಾಯಕ್ಕೆ ಕನ್ನಡದಂತಹ ತಾಯ್ನುಡಿಗಳು ಹತ್ತಿರ. ಹಾಗಾಗಿ ಕನ್ನಡದಂತಹ ಭಾಷೆಗಳಲ್ಲಿ ಕೃಷಿ ಇಂಜಿನಿಯರಿಂಗ್‌ ನ ಪದಗಳನ್ನು ವಿವರಿಸುವ ಅಗತ್ಯವಿದೆ. ಕೃಷಿಕರಿಗೆ, ಕೃಷಿ ಉದ್ಯಮಿಗಳಿಗೆ, ವಿಜ್ಞಾನಿಗಳಿಗೆ ಉಪಯುಕ್ತವಾಗಲಿರುವ ಕೃತಿಯನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಹೊರತಂದಿದೆ. ಸಿ.ಕೆ.ಕುಮುದಿನಿ ನೇತೃತ್ವದಲ್ಲಿ ಪದಗಳ ಸಂಗ್ರಹಕಾರ್ಯ ನಡೆದಿದೆ. 

ಕೋಶದ ಕೆಲವು ಪದಗಳು:
Awl- ದಬ್ಬಳ
Carrier-ವಾಹಕ
Diffuse- ವಿಸರಣ

About the Author

ಶಾಂತಾರಾಮ ಪ್ರಭು

ಮಲೆನಾಡಿಗರ ಹೆಮ್ಮೆಯ ನಡೆದಾಡುವ ಶಬ್ದಕೋಶ ಎಂದೇ ಪ್ರಖ್ಯಾತರಾದವರು ನಿಟ್ಟೂರಿನ ಶಾಂತಾರಾಮ ಪ್ರಭು. 37 ವರ್ಷ ಇಂಗ್ಲಿಷ್‌ ಉಪನ್ಯಾಸಕರಾಗಿದ್ದು, ನಿಟ್ಟೂರು ಪದವಿಪೂರ್ವ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಸದಾ ಕ್ರಿಯಾಶೀಲರು,ನಿಗರ್ವಿಗಳು ಹಾಗು ನಿರಂತರ ಅಧ್ಯಯನ ಶೀಲರಾದ ಅವರು ಎಂಟು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ.  ಯಕ್ಷ ಗಾನ ಕ್ಷೇತ್ರದಲ್ಲಿ ಕೊಡಲ್ಪಡುವ ಅನೇಕ ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬಂದಿದ್ದು, ಯಕ್ಷ ಸ್ವರ್ಣ,ಯಕ್ಷ ವಶಿಷ್ಟ ಹಾಗು ಉಡುಪಿಯ ಕಲಾರಂಗ ಸಂಸ್ಥೆ ನೀಡಿದ 'ಪೆರ್ಲ ಕೃಷ್ಣಭಟ್‌' ಪ್ರಶಸ್ತಿಗಳು ಪ್ರಮುಖವಾದವು. ತಮ್ಮ ಪೂರ್ಣ ಜೀವನವನ್ನು ಸಾಹಿತ್ಯದ ಅಧ್ಯಯನ ಹಾಗು ಯಕ್ಷ ಗಾನ ತಾಳಮದ್ದಳೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ...

READ MORE

Related Books