‘ಕನ್ನಡ-ಇಂಗ್ಲಿಷ್ ಸಂಕ್ಷಿಪ್ತ ನಿಘಂಟು’ ವಿ. ಕೃಷ್ಣ ಅವರು ರೂಪಿಸಿರುವ ಬೃಹತ್ ನಿಘಂಟು ಆಗಿದೆ. ಕನ್ನಡ ಸಾರಸತ್ವ ಲೋಕಕ್ಕೆ ವಿವರಣಾತ್ಮಕವಾಗಿರುವ, ಮೂರು ಸಂಪುಟಗಳ ಒಂದು ಬೃಹತ್ ಕನ್ನಡ-ಇಂಗ್ಲಿಷ್ ನಿಘಂಟನ್ನು ನೀಡಿರುವ ಕೃಷ್ಣ ಅವರು ವಿದ್ಯಾರ್ಥಿಗಳು, ಅನುವಾದಕರು, ಸಾಮಾನ್ಯ ಭಾಷಾಭ್ಯಾಸಿಗಳು ಹಾಗೂ ಕನ್ನಡವನ್ನು ಕಲಿಯಬಯಸುವ ಅನ್ಯಭಾಷಿಕರಿಗಾಗಿ ಅನುಕೂಲವಾಗಿದೆ. ಕೃತಿಯು ತುಂಬಾ ವಿವರಣಾತ್ಮಕವಾಗಿದ್ದು, ಕನ್ನಡ ಪದಗಳ ಅರ್ಥ ಹಾಗೂ ಅದರ ಛಾಯೆಗಳನ್ನು ನಿಖರವಾಗಿ ತಿಳಿಯಲು ಸಹಾಯಕವಾಗಿದೆ. ವಿವರಣೆಗಾಗಿ ಸಾಧ್ಯವಾದಷ್ಟೂ ಸರಳ ಇಂಗ್ಲಿಷ್ ಪದಗಳನ್ನು ಬಳಸಲಾಗಿದೆ. ಕನ್ನಡ ಪದಗಳಿಗೆ ಇಂಗ್ಲಿಷ್ ನಲ್ಲಿ ಲಿಪ್ಯಂತರವನ್ನು ಉಚ್ಛಾರಸೂಚಕ ಚಿಹ್ನೆಗಳೊಂದಿಗೆ ನೀಡಿದ್ದು, ಅನ್ಯಭಾಷಿಕರಿಗೆ ಸುಲಭವಾಗಿ ಕನ್ನಡ ಕಲಿಯಲು ಕೂಡಾ ಅನುಕೂಲಕರವಾಗಿದೆ. ಈ ನಿಘಂಟಿಗಾಗಿ ಪದಗಳನ್ನು ಆಯ್ಕೆ ಮಾಡುವಾಗ ಪ್ರಸ್ತುತ ಬಳಸುತ್ತಿರುವ ಹಾಗೂ ನಡುಗನ್ನಡದ ಪದಗಳನ್ನು ನೀಡುವಂತಹುದೂ ಆಗಿದೆ. ಸಮಾನಾರ್ಥವನ್ನು ನೀಡುವ ಮುಖ್ಯೋಲ್ಲೇಖಗಳು ಪರಸ್ಪರ ಹತ್ತಿರದಲ್ಲಿದ್ದಾಗ ಮಾತ್ರ ಅವುಗಳಲ್ಲಿ ಒಂದಕ್ಕೆ ಅರ್ಥಗಳನ್ನು ನೀಡಿ,. ಉಳಿದವುಗಳಿಗೆ ಅರ್ಥವನ್ನು ನೀಡಿರುವ ಮುಖ್ಯೋಲ್ಲೇಖವನ್ನು ನೋಡಿ ಎಂಬ ಸೂಚನೆಯನ್ನು ಕೊಡಲಾಗಿದೆ. ಎರಡೂ ಪುಟಗಳಿಗೂ ಹೆಚ್ಚು ದೂರದಲ್ಲಿದ್ದರೆ ಅರ್ಥಗಳನ್ನು ಆ ಎಲ್ಲ ಪದಗಳಿಗೂ ಅವುಗಳ ಮುಂದೆಯೇ ನೀಡಲಾಗಿದೆ. ಈ ಮೂಲಕ ನಿಘಂಟಿನ ಪುಟಗಳನ್ನು ತಿರುಗಿಸಿ ಹುಡುಕುವ ಶ್ರಮವನ್ನು ತಪ್ಪಿಸಿ ಬಳಕೆದಾರರ ಸ್ನೇಹಿಯನ್ನಾಗಿಸಲಾಗಿದೆ.
©2024 Book Brahma Private Limited.