ಜಗತ್ತಿನಲ್ಲಿ ಪ್ರೀತಿಗಾಗಿ ಹಂಬಲಿಸದಿರುವ ಪರಿತಪಿಸದಿರುವ ಜೀವವಿಲ್ಲ. ಜೀವಿಗೆ ಹೊಟ್ಟೆ ಹಸಿವಿನಂತೆ ಪ್ರೇಮದ ಹಸಿವು ಕೂಡ ನಿರಂತರವಾಗಿದ್ದು, ದುರಿತ ಕಾಲಘಟಕ್ಕೆ ನಿಷ್ಕಲ್ಮಶ ಪ್ರೀತಿ ಗಳಿಕೆ ಬಹಳ ದುಬಾರಿ ಎನ್ನುತ್ತದೆ ಲೇಖಕಿ ಕಾವ್ಯ ಪುನೀತ್ ವನಗೂರು ಅವರ ‘ಇಂತೀ, ನಿನಗೆ ಸಲ್ಲದವಳು’ ಕವನಸಂಕಲನ. ಇಲ್ಲಿನ ಸಾಲುಗಳು ಕತ್ತಲಿನಲ್ಲಿ ಕನವರಿಸಿದವುಗಳು ಎನ್ನುತ್ತಾರೆ ಕವಯಿತ್ರಿ. ಒಡಲಾಳದಲ್ಲಿ ಅಡಗಿ ಕುಳಿತಿದ್ದ ತಮ್ಮ ಬಹುದಿನಗಳ ಪ್ರೇಮಭರಿತ ಸಂಕಟ, ಸಂತಸ, ಹತಾಶೆ, ಅಸಹಾಯಕತೆ, ಭಾವ ಸಂಕೀರ್ಣತೆಗಳನ್ನ ಒಮ್ಮೆಲೇ ಹಗುರವಾಗಿ ಬಿಡಬೇಕೆಂಬುವ ನಿಲುವನ್ನ ಇಲ್ಲಿನ ಕವನಗಳಲ್ಲಿ ಕಾಣಬಹುದು. ಕವನಸಂಕಲನವು 119 ಕವನಗಳನ್ನು ಹೊಂದಿದ್ದು, 90ರಷ್ಟು ಕವಿತೆಗಳು ಪ್ರೇಮಕವಿತೆಗಳಾಗಿ ಹೊರಹೊಮ್ಮಿದೆ. ಪ್ರೇಮಕ್ಕಾಗಿ ತುಡಿಯುವ ಆರಾಧಿಸುವ ಪರಿಭಾವಗಳು ಇಲ್ಲಿ ತೀವ್ರವಾಗಿ ವ್ಯಕ್ತವಾಗಿವೆ.
©2024 Book Brahma Private Limited.