‘ಗೃಹಪ್ರವೇಶ’ ಕೃತಿಯು ರವೀಂದ್ರನಾಥ ಠಾಕೂರ್ ಅವರ ಮೂಲಕೃತಿಯಾಗಿದ್ದು, ಕನ್ನಡಕ್ಕೆ ಶ್ರೀನಿವಾಸ್ ವಿ. ಸುತ್ರಾವೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯು ಸೃಜನಶೀಲ ಭಾಷಾಂತರವಾಗಿದ್ದೂ ಮೂಲಕ್ಕೆ ನಿಷ್ಠತೆಯನ್ನು ಕಾಯ್ದುಕೊಂಡಿದೆ. ನಾಟಕದ ಒಳಗಿನ ವಿವರಗಳನ್ನು ಬಿ.ಎಂ.ಶ್ರೀ. ಮತ್ತು ಕುವೆಂಪು ಅವರ ಹಾಗೆ ಕನ್ನಡದ ಜಾಯಮಾನಕ್ಕೆ ಅಪ್ಯಾಯಮಾನ ಅನ್ನಿಸುತ್ತದೆ. ವಸ್ತುವಿನ ದೃಷ್ಟಿಯಿಂದ ನೋಡಿದಾಗ ದುರಂತದ ಛಾಯೆ ಉಳ್ಳ ವಿಷಾದಗೀತೆಯಿದು. ಓದುತ್ತಿದ್ದರೆ, ಕನಸುಗಾರನೊಬ್ಬನ ಹೃದಯಗೀತೆಯನ್ನು ಕೇಳುವಂತಿದೆ. ನಾಟಕದ ಉದ್ದಕ್ಕೂ ಮರಣಮೃದಂಗ ಮಿಡಿಯುತ್ತಿರುವುದು ಅನುಭವಸ್ಥೆ ಬರುತ್ತದೆ. ಇಲ್ಲಿನ ನಾಯಕ ಜತಿನ್ ತನ್ನ ಸುಂದರ ಹೆಂಡತಿಗಾಗಿ ಮಹಲನ್ನು ಕಟ್ಟಿಸುವ ಕನಸು ಕ೦ಡವನು. ಅವನು ಮರಣಶಯ್ಕೆಯಲ್ಲಿದ್ದರೂ ತನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಕ್ಕಿಂತಲೂ, ತನ್ನ ಕನಸಿನ ಮನೆಯ ಬಗ್ಗೆ ತಲೆಕೆಡಿಸಿಕೊಳ್ಳುವುದೇ ಹೆಚ್ಚು ನಾವು ಹೆಚ್ಚು ಪ್ರೀತಿಸುವುದು ನಮ್ಮನ್ನು ಕಡೆಗಣಿಸಿದವರನ್ನೇ ಎಂಬುದು ನಮ್ಮ ಬದುಕಿನಲ್ಲಿ ಹೇಗೆ ದಿಟವೋ ಹಾಗೆಯೇ ಇಲ್ಲಿನ ಜತಿನ್ ವಿಷಯದಲ್ಲೂ ದಿಟವೆನಿಸುತ್ತದೆ.
(ಹೊಸತು, ಅಕ್ಟೋಬರ್ 2012, ಪುಸ್ತಕದ ಪರಿಚಯ)
ಕನ್ನಡ ಸಾಹಿತ್ಯವು ಬೇರೆ ಬೇರೆ ಕಾಲಘಟ್ಟಗಳಲ್ಲಿ ಹೊಸ ಚೈತನ್ಯವನ್ನು ಪಡೆದುಕೊ೦ಡಿದ್ದೇ ಸೃಜನಶೀಲ ಭಾಷಾಂತರಗಳಿಂದ ಈ ಸಂದರ್ಭದಲ್ಲಿ ನಮಗೆ ಪಂಪ, ರನ್ನ, ಕುಮಾರವ್ಯಾಸ, ಬಿ.ಎಂ.ಶ್ರೀ., ಬೇಂದ್ರೆ, ಕುವೆಂಪು – ಇವರೆಲ್ಲರೂ ನೆನಪಾಗುತ್ತಾರೆ ಬಿ.ಎಂ.ಶ್ರೀ.ಯವರಂತೂ ಭಾಷಾಂತರದ ಶಕ್ತಿ ಸಾಮರ್ಥ್ಯಗಳನ್ನು ಸಾಬೀತುಗೊಳಿಸಿದವರು. ಇವರು ಸ್ವತಃ ಬರೆದದ್ದಕ್ಕಿಂತ ಭಾಷಾಂತರಿಸಿದ್ದೇ ಹೆಚ್ಚು ಈ ಕೃತಿಯ ಮೂಲಕ ಶ್ರೀನಿವಾಸ ಪಿ ಸುತ್ತಾವೆಯವರೂ ಅಷ್ಟೇ ಸೃಜನಶೀಲ ಲೇಖಕರಾಗಿ ನಿಷ್ಠಾವಂತ ಅನುವಾದಕರಾಗಿ ಗುರುತಿಸಿಕೊಂಡವರು. ಈ ಕೃತಿಯು ಸೃಜನಶೀಲ ಭಾಷಾಂತರವಾಗಿದ್ದೂ ಮೂಲಕ್ಕೆ ನಿಷ್ಠತೆಯನ್ನು ಕಾಯ್ದುಕೊಂಡಿದೆ. ನಾಟಕದ ಒಳಗಿನ ವಿವರಗಳನ್ನು ಬಿ.ಎಂ.ಶ್ರೀ. ಮತ್ತು ಕುವೆಂಪು ಅವರ ಹಾಗೆ ಕನ್ನಡದ ಜಾಯಮಾನಕ್ಕೆ ಅಪ್ಯಾಯಮಾನ ಅನ್ನಿಸುತ್ತದೆ. ವಸ್ತುವಿನ ದೃಷ್ಟಿಯಿಂದ ನೋಡಿದಾಗ ದುರಂತದ ಛಾಯ ಉಳ್ಳ ವಿಷಾದಗೀತೆಯಿದು. ಓದುತ್ತಿದ್ದರೆ, ಕನಸುಗಾರನೊಬ್ಬನ ಹೃದಯಗೀತೆಯನ್ನು ಕೇಳುವಂತಿದೆ. ನಾಟಕದ ಉದ್ದಕ್ಕೂ ಮರಣಮೃದಂಗ ಮಿಡಿಯುತ್ತಿರುವುದು ಅನುಭವಸ್ಥೆ ಬರುತ್ತದೆ. ಇಲ್ಲಿನ ನಾಯಕ ಜತಿನ್ ತನ್ನ ಸುಂದರ ಹೆಂಡತಿಗಾಗಿ ಮಹಲನ್ನು ಕಟ್ಟಿಸುವ ಕನಸು ಕ೦ಡವನು. ಅವನು ಮರಣಶಯ್ಕೆಯಲ್ಲಿದ್ದರೂ ತನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಕ್ಕಿಂತಲೂ, ತನ್ನ ಕನಸಿನ ಮನೆಯ ಬಗ್ಗೆ ತಲೆಕೆಡಿಸಿಕೊಳ್ಳುವುದೇ ಹೆಚ್ಚು ನಾವು ಹೆಚ್ಚು ಪ್ರೀತಿಸುವುದು ನಮ್ಮನ್ನು ಕಡೆಗಣಿಸಿದವರನ್ನೇ ಎಂಬುದು ನಮ್ಮ ಬದುಕಿನಲ್ಲಿ ಹೇಗೆ ದಿಟವೋ ಹಾಗೆಯೇ ಇಲ್ಲಿನ ಜತಿನ್ ವಿಷಯದಲ್ಲೂ ದಿಟವೆನಿಸುತ್ತದೆ. ಇದನ್ನು ಓದುತ್ತಿದ್ದರೆ ಷೇಕ್ಸ್‌ಪಿಯರ್‌ನ 'ಕಿಂಗ್ ಲಿಯರ್' ನಾಟಕ ನೆನಪಾಗುತ್ತದೆ. ಮನುಷ್ಯನ ಬದುಕಿನ ದುರಂತದ ಬಗ್ಗೆ ಗಾಢವಾಗಿ ಯೋಚಿಸುವಂತೆ ಮಾಡಿದ ಶ್ರೇಷ್ಟ ನಾಟಕದ ಅನುವಾದಿತ ರೂಪ ಗೃಹಪ್ರವೇಶ.
©2024 Book Brahma Private Limited.