ಭಾಸ ಕವಿಯ ಪ್ರತಿಜ್ಞಾ ಯೌಗಂಧರಾಯಣ

Author : ಎಲ್. ಗುಂಡಪ್ಪ

Pages 98




Year of Publication: 1937
Published by: ಎಲ್. ಗುಂಡಪ್ಪ
Address: ಬೆಂಗಳೂರು

Synopsys

ಸಂಸ್ಕೃತ ಕವಿಗಳ ಪೈಕಿ ಕಾಳಿದಾಸನ ನಂತರದ ಕವಿ ಎಂದರೆ ಭಾಸ. ಸ್ವಪ್ನ ವಾಸವದತ್ತ ಸೇರಿದಂತೆ ಇತರೆ ಆತನ ನಾಟಕಗಳು ಸಂಸ್ಕೃತ ಸಾಹಿತ್ಯ ಮಾತ್ರವಲ್ಲ ಕನ್ನಡ ಸಾಹಿತ್ಯದಲ್ಲೂ ಚಿರಸ್ಥಾಯಿಯಾಗಿ ಉಳಿದಿವೆ. ಪ್ರತಿಜ್ಞಾ ಯೌಗಂಧರಾಯಣ ಎಂಬುದು ಭಾಸ ಕವಿಯ ನಾಟಕ. ಕೃತಿಯಲ್ಲಿ ಭಾಸ ಅರಿತಿದ್ದ ಬೃಹತ್ಕಥೆಯ ಸಾರ ಯಾವುದು?, ಕಥಾಸಾರಾಂಶ, ಪ್ರತಿಜ್ಞಾ ಯೌಗಂಧರಾಯಣ ನಾಟಕ ಹಾಗೂ ಟಿಪ್ಪಣಿಗಳು ನೀಡಿದ್ದು ಓದುಗರಿಗೆ ಅನುಕೂಲವಾಗಿವೆ.

ಪ್ರತಿಜ್ಞಾ ಯೌಗಂಧರಾಯಣದಲ್ಲಿ ವತ್ಸರಾಜನು ವಾಸವದತ್ತೆಯನ್ನು ಮದುವೆಯಾಗುತ್ತಾನೆ. ವಾಸವದತ್ತೆಯ ಅಪಹರಣವಾಗುತ್ತದೆ. ಇದೇ ವಸ್ತುವಾದರೂ ಸೆರೆಯಲ್ಲಿರುವ ವತ್ಸರಾಜನನ್ನು ಬಿಡಿಸಿಕೊಂಡು ಬರುವ ಮಂತ್ರಿ ಯೌಗಂಧರಾಯಣನ ಚಾಕಚಕ್ಯತೆಯು ನಾಟಕದ ವಸ್ತುವಾಗುತ್ತದೆ.

About the Author

ಎಲ್. ಗುಂಡಪ್ಪ
(08 January 1903 - 17 December 1986)

ಹಾಸನ ಜಿಲ್ಲೆ ಮತಿಘಟ್ಟದವರಾದ ಎಲ್.ಗುಂಡಪ್ಪ ಅವರು ಕನ್ನಡದ ಪ್ರಮುಖ ವಿದ್ವಾಂಸರಲ್ಲಿ ಒಬ್ಬರು. ಅವರ ತಂದೆ ಲಿಂಗಣ್ಣಯ್ಯ ಮತ್ತು ತಾಯಿ ಚನ್ನಮ್ಮ. ಮೈಸೂರು ವಿಶ್ವವಿದ್ಯಾಲಯದ ಸಿಲ್ವರ್ ಜ್ಯೂಬಿಲಿ ಕನ್ನಡ ಸ್ವರ್ಣಪದಕ ವಿಜೇತರಾಗಿದರು. ತಮಿಳು - ಕನ್ನಡ ಬಾಂಧವ್ಯಕ್ಕಾಗಿ ಶ್ರಮಿಸಿದಕ್ಕಾಗಿ ಅವರಿಗೆ ನಾಗರ್ ಕೋಯಲಿನಲ್ಲಿ ಬಂಗಾರದ ಪದಕ ನೀಡಿ ಗೌರವಿಸಲಾಗಿತ್ತು. ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಹಿರಿಮೆ ಅವರದು. ಕಳ್ಳಮರಿ, ಮಕ್ಕಳ ರವೀಂದ್ರರು, ರವೀಂದ್ರನಾಥ ಠಾಕೂರರ ಜೀವನ ವ್ಯಕ್ತಿತ್ವ ಪರಿಚಯ (ಭಾರತ ಸರ್ಕಾರದ ಬಹುಮಾನಗಳಿಸಿರುವ ಕೃತಿ). ಒಂಬತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಪಠ್ಯಪುಸ್ತಕ ರಚಿಸಿರುವ ಅವರಿಗೆ ಅಕಾಡೆಮಿ ಪ್ರಶಸ್ತಿ ಹಾಗೂ ದೇವರಾಜ ಬಹದ್ದೂರ್ ಬಹುಮಾನ ದೊರೆತಿದೆ. ಅವರ 52 ಕೃತಿಗಳು ಪ್ರಕಟವಾಗಿವೆ. ...

READ MORE

Related Books