ಫಾದರ್

Author : ಸಿ. ನಾಗಣ್ಣ

Pages 80

₹ 40.00




Year of Publication: 2000
Published by: ಅಭಿನವ ಪ್ರಕಾಶನ
Address: ಅಭಿನವ, 17/18-3, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

ಆಗಸ್ಟ್ ಸ್ಟ್ರಿಂಡ್ ಬರ್ಗ್ ಅವರ 'ಫಾದರ್' ನಾಟಕದ ಕನ್ನಡಾನುವಾದ. ಈ ಕೃತಿಯನ್ನು ಸಿ.ನಾಗಣ್ಣನವರು ಕನ್ನಡೀಕರಿಸಿದ್ದಾರೆ. ಸ್ಟ್ರಿಂಡ್ ಬರ್ಗ್‌ನ ’ಫಾದರ್’ ವಾಸ್ತವವಾದಿ ನಾಟಕಗಳ ಪೈಕಿ ಅತ್ಯಂತ ಮಹತ್ವದ ಮತ್ತು ಪ್ರಯೋಗಾತ್ಮಕವಾದ ನಾಟಕ. ಅಪಾರ ಪ್ರತಿಭಾವಂತನಾಗಿದ್ದ ಈ ನಾಟಕಕಾರ ತನ್ನ ಜೀವನದ ಕೆಲ ವೈಯಕ್ತಿಕ ಘಟನೆಗಳಿಗೆ ನುಡಿಯ ಉಡುಗೆ ತೊಡಿಸಿದ್ದಾನೆ. ’ಫಾದರ್’ ನಾಟಕಕಾರನ ವೈಯಕ್ತಿಕ ಘಟನೆಗಳನ್ನು ಒಳಗೊಳ್ಳುತ್ತಲೇ ಮನುಷ್ಯ ಜೀವನದ ವ್ಯಂಗ್ಯ, ಅನುಮಾನ, ಅಪನಂಬಿಕೆ, ಅಸಮಾಧಾನ ಸಂಬಂಧಗಳ ತೀಕ್ಷ್ಣತೆಗಳನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತದೆ. ಸಮರ್ಥ ಅನುವಾದಕರಾಗಿ ಈಗಾಗಲೇ ಸಾಕಷ್ಟು ಹೆಸರು ಮಾಡಿರುವ ಸಿ.ನಾಗಣ್ಣ ಅವರು ಸಂಕೀರ್ಣವಾದ ಈ ನಾಟಕಗಳನ್ನು ಇದು ನಮ್ಮದೇ ನಾಟಕ ಎನ್ನುವಷ್ಟು ಸೊಗಸಾಗಿ ಕನ್ನಡದ ಸಂವೇದನೆಗಳಿಗೆ ತಕ್ಕಂತೆ ಅನುವಾದಿಸಿದ್ದಾರೆ

About the Author

ಸಿ. ನಾಗಣ್ಣ

ಡಾ. ಸಿ. ನಾಗಣ್ಣ ಅವರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ತೌಲನಿಕ ಸಾಹಿತ್ಯ ಮತ್ತು ಭಾಷಾಂತರ ವಿಭಾಗದ ಪ್ರಾಧ್ಯಾಪಕರಾಗಿಯೂ, ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯ ಬೋಧಕರಾಗಿಯೂ ಸೇವೆ ಸಲ್ಲಿಸಿ ನಿವೃತ್ತರು. ಕವಿ, ವಿಮರ್ಶಕ, ಭಾಷಾಂತರಕಾರರಾಗಿ ಹಲವು ಗ್ರಂಥಗಳನ್ನು ರಚಿಸಿದ್ದಾರೆ. ಭಾರತೀಯ ಜ್ಞಾನಪೀಠ, ಸರಸ್ವತಿ ಸಮ್ಮಾನ್, ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸದಸ್ಯರಾಗಿ ಕೆಲಸ ನಿರ್ವಹಿಸಿದ್ದರು. ಆಫ್ರಿಕನ್ ಲೇಖಕ ಚಿನುವ ಅಚಿಬೆಯ ಥಿಂಗ್ಸ್ ಫಾಲ್ ಅಪಾರ್ಟ್ ಕೃತಿಯನ್ನು ‘ಭಂಗ’ ಶೀರ್ಷಿಕೆಯಡಿ ಅನುವಾದಿಸಿದ್ದಾರೆ ಖ್ಯಾತ ಬರಹಗಾರ ಸಿ.ಎನ್. ರಾಮಚಂದ್ರನ್ ಅವರ ಬದುಕು-ಬರೆಹ ಕುರಿತ ಕೃತಿ ಪ್ರಕಟಿಸಿದ್ದಾರೆ. ...

READ MORE

Related Books