'ಮೂರನೆಯ ಮಂತ್ರ' ಹಿಂದಿ ಮೂಲದ ಅನುವಾದಿತ ನಾಟಕ. ಯೋಗೇಶ್ ತ್ರಿಪಾಠಿ ಅವರ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಸರಜೂ ಕಾಟ್ಕರ್.
ಬೋಧಿಸತ್ವನ ಸತ್ಯ, ದಯೆ, ಕರುಣೆಯ ನೆಲೆಯಲ್ಲಿಯೇ ಮೂಡಿರುವ ನಾಟಕದ ಕಥಾ ಹಂದರ. ನಾಟಕದ ಕಥಾವಸ್ತು ಬುದ್ಧನಿಗೆ ಸಂಬಂಧಿಸಿದ್ದು, ಆತನ ಪೂರ್ವ ಜನ್ಮದ ಕಥೆಗಳನ್ನು ಜಾತಕ ಕಥೆಗಳೆಂದು ಕರೆಯುತ್ತಾರೆ. ಆತ ಅನೇಕ ಸಲ ಇಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾ, ಪ್ರತಿಷ್ಠೆಯ ಮಿಥ್ಯೆಯನ್ನು ಮುರಿಯುತ್ತಾನೆ.
ಡಾ. ಸರಜೂ ಕಾಟ್ಕರ್ ಕನ್ನಡಕೆ ತಂದಿರುವ 'ಮೂರನೆಯ ಮಂತ್ರ' ನಾಟಕವನ್ನು ಎಲ್ಲರೂ, ವಿಶೇಷವಾಗಿ ನಮ್ಮನ್ನಾಳುವ ಜನಪ್ರತಿನಿಧಿಗಳು ಕಡ್ಡಾಯವಾಗಿ ಓದಬೇಕು. ಹಿಂದಿ ಸಾಹಿತ್ಯದ ಪ್ರಮುಖ ನಾಟಕಕಾರ ಯೋಗೇಶ್ ಮೂರನೆಯ ಮಂತ್ರ ತ್ರಿಪಾಠಿ ಅವರ 'ತೀಸ್ತಿ ಮಂತ್ರ'ವೇ ಕನ್ನಡದಲ್ಲಿ ’ಮೂರನೆಯ ಮಂತ್ರ'ವಾಗಿ ನಮ್ಮ ನೆಲದ ನಾಟಕವೇ ಆಗಿ ರೂಪಾಂತರಗೊಂಡಿದೆ. ಕತೆಯ ಕ್ಯಾನ್ವಾಸ್ ಅನ್ನು ನಾಟಕಕಾರರು ಬೋಧಿಸತ್ವನ ಸತ್ಯ, ದಯೆ, ಕರುಣೆಯ ನೆಲೆಯಲ್ಲಿಯೇ ವಿಸ್ತರಿಸಿದ್ದಾರೆ. ಅಂದಿನ ಕತೆ ಇಂದಿಗೂ ಅನ್ವಯವಾಗುವಂತಿದೆ.
15 ಡಿಸೆಂಬರ್ 2019
ಕೃಪೆ : ವಿಜಯ ಕರ್ನಾಟಕ
©2025 Book Brahma Private Limited.