‘ಹಕ್ಕಿಗಳು’ ಗ್ರೀಕ್ ದೇಶದ ಸುಪ್ರಸಿದ್ಧ ಹಾಸ್ಯಕವಿ, ನಾಟಕಕಾರ ಅರಿಸ್ಟೋಫೆನಿಸ್ ಅವರ ಕೆಲವು ನಾಟಕಗಳನ್ನು ಲೇಖಕ ಸುಮತೀಂದ್ರ ನಾಡಿಗ ಕನ್ನಡೀಕರಿಸಿದ್ದಾರೆ. ‘ಹಕ್ಕಿಗಳು ’ ನಾಟಕ, ವಿಜಯೋನ್ಮತ್ತರಾದ ಅಥೆನ್ಸ್ ನಗರದ ಜನ ತಮ್ಮ ಸೈನ್ಯದ ವಿಜಯ ಯಾತ್ರೆಯಿಂದ ಪವಾಡವನ್ನೆಲ್ಲ ನಿರೀಕ್ಷಿಸುತ್ತಿದ್ದರು, ಈ ಅವಾಸ್ತವಿಕ ನಿರೀಕ್ಷೆಗಳನ್ನು ಲೇಖಕ ಈ ನಾಟಕದಲ್ಲಿ ವಿಡಂಬನೆಗೆ ಒಳಪಡಿಸಿದ್ದಾನೆ. ಈ ನಾಟಕ ತನ್ನ ಅಸದೃಶ ವಿನೋದ ದೃಷ್ಟಿಗಾಗಿ. ಅಸಾಮಾನ್ಯ ಕಲ್ಪಕ ಶಕ್ತಿಗಾಗಿ ಹೆಸರುವಾಸಿಯಾಗಿದೆ. ಉಳಿದೆಲ್ಲಾ ನಾಟಕಗಳಿಗಿಂತ ಹೆಚ್ಚಾಗಿ ಇಲ್ಲಿ ನಿಜವಾದ ತಮಾಷೆಯ ಹೂಬಾಣಗಳಿವೆ. ಇಲ್ಲಿರುವ ಭಾವಗೀತೆಗಳು, ಗ್ರೀಕ್ ಭಾವಗೀತೆಗಳಲ್ಲಿ ಅತ್ಯುತ್ತಮವಾದುವುಗಳ ಸಾಲಿಗೆ ಸೇರುವಂತವು. ಈ ನಾಟಕವನ್ನು ತಿಳಿಯಲು ಅಥೆನ್ಸ್ ನ ಇತಿಹಾಸದ ವಿವರ ಅಭ್ಯಾಸದ ಅಗತ್ಯವಿಲ್ಲ. ಆದ್ದರಿಂದ, ಇದು ಆಧುನಿಕ ವಾಚಕರಿಗೆ ಸುಲಭ ಗ್ರಾಹ್ಯವಾಗುತ್ತದೆ
©2024 Book Brahma Private Limited.