ಖ್ಯಾತ ನಾಟಕಕಾರ, ಅನುವಾದಕ ಕೆ.ವಿ. ಸುಬ್ಬಣ್ಣ ಅವರ ಕೃತಿ-‘ಐದು ಸಂಸ್ಕೃತ ನಾಟಕಗಳು’. ಸಂಸ್ಕೃತ ನಾಟಕಗಳು, ಅವುಗಳ ಹುಟ್ಟು, ರಂಗಕ್ಕೆ ಅಳವಡಿಸುವ ಕ್ರಿಯೆ ಇತ್ಯಾದಿ ಪರಿಕಲ್ಪನೆಗಳ ಕುರಿತು ಮಹತ್ವದ ಕೃತಿಗಳನ್ನು ರಚಿಸಿದ ಈ ಲೇಖಕರು ಕಾಳಿದಾಸನ `ಅಭಿಜ್ಞಾನ ಶಾಕುಂತಲಮ್' ಆಧರಿಸಿದ `ಲೋಕಶಾಕುಂತಲ, `ಮಾಲವಿಕಾಗ್ನಿಮಿತ್ರ' ಆಧರಿಸಿದ `ವಿದಿಶೆಯ ವಿದೂಷಕ, ವಿಶಾಖದತ್ತನ `ಮುದ್ರಾರಾಕ್ಷಸ' ಆಧರಿಸಿದ `ಚಾಣಕ್ಯ ಪ್ರಪಂಚ', ಬೋಧಾಯನ ಅಥವಾ ಮಹೇಂದ್ರವಿಕ್ರಮವರ್ಮನ `ಭಗವದಜ್ಜುಕೀಯಮ್'ದ ಅನುವಾದ ಮತ್ತು ಅದೇ ಕೃತಿಯ `ಸೂಳೆ-ಸನ್ಯಾಸಿ' ಎಂಬ ರೂಪಾಂತರಗಳನ್ನು ಸಂಕಲಿಸಿದ್ದಾರೆ. ಈ ಎಲ್ಲ ಅನುವಾದ/ರೂಪಾಂತರಗಳೂ ನಡೆದಿದ್ದು ನಿರ್ದಿಷ್ಟ ರಂಗಪ್ರಯೋಗಗಳ ಅಗತ್ಯಕ್ಕಾಗಿ. ಮತ್ತು, ಇವೆಲ್ಲವೂ ಮೂಲವನ್ನಾಧರಿಸಿ ಕಟ್ಟಿರುವ ಮರುರೂಪಗಳೇ ಹೊರತು ನೇರ ಅನುವಾದಗಳಲ್ಲ. ಸಂಸ್ಕ ತ ಸಾಹಿತ್ಯದ ಮೇರುಕೃತಿಗಳನ್ನು ಕನ್ನಡದ/ಭಾರತದ ಸಮಕಾಲೀನ ಬೌದ್ಧಿಕ ಸಂದರ್ಭಗಳಿಗೆ ಸಂವಾದಿಯಾಗುವಂತೆ ಹೊಸ ರೂಪಗಳಲ್ಲಿ ಇಟ್ಟು ನೋಡುವ ಪ್ರಯೋಗವು ಈ ಎಲ್ಲ ರೂಪಾಂತರಗಳ ಸ್ಥಾಯೀಗುಣ ಎಂದು ಲೇಖಕರು ಹೇಳಿದ್ದಾರೆ.
©2024 Book Brahma Private Limited.