ಖ್ಯಾತ ಸಾಹಿತಿ ಕೆ.ಎಂ. ಸೀತಾರಾಮಯ್ಯ ಅವರ ಅನುವಾದಿತ ನಾಟಕ ಕೃತಿ-ಒಡಿಸ್ಸಿ. ಗ್ರೀಕ್ ಮಹಾಕವಿ ಹೋಮರ್ ಕೃತಿಯಲ್ಲಿಯ ಯೂಲಿಸಿಸ್ಸನ ಸಾಹಸಮಯ ಬದುಕಿನ ಚಿತ್ರಣದ ನಾಟಕವಿದು. ಆಡಳಿತ ವೈಖರಿ, ಕ್ರೌರ್ಯ, ಹೃದಯ ವೈಶಾಲ್ಯತೆ, ಮಾನವೀಯತೆ, ಬದುಕಿನ ಸಾರ್ಥಕತೆ, ಮನುಷ್ಯನ ಅಸೂಯೆಯ ಪರಮಾವಧಿ, ಅಧಿಕಾರದ ದಾಹ ...ಹೀಗೆ ಮನುಷ್ಯನ ದೌರ್ಬಲ್ಯಗಳ ಜೊತೆ ಸಾಮರ್ಥ್ಯಗಳ ಚಿತ್ರಣ ನೀಡುವ ಕಥಾ ವಸ್ತುವನ್ನು ಒಳಗೊಂಡಿದೆ. ಜೊತೆಗೆ ನಮ್ಮ ಕರ್ಮಗಳಿಗೆ ನಾವೇ ಕಾರಣರು. ಕರ್ಮದಿಂದ ತಪ್ಪಿಸಿಕೊಳ್ಳಲಾಗದು ಎಂಬ ಕರ್ಮಸಿದ್ಧಾಂತದ ಹೊಳವುಗಳನ್ನೂ ಸಹ ಕಾಣಬಹುದು.
©2025 Book Brahma Private Limited.