‘ಅನಿಚ್ಚಾ’ ಜಾನಕಿ ಸುಂದರೇಶ್ ಅವರ ಅನುವಾದಿತ ನಾಟಕವಾಗಿದೆ. ಬಹಳಷ್ಟು ಗಂಭೀರ ವಿಷಯಗಳಿಗೆ ಚಿಕ್ಕಾಸಿನ ಬೆಲೆಯೂ ಕೊಡಲಾರದ ಮಾನವ ಅತಿ ಚಿಕ್ಕ ಚಿಕ್ಕ ಸಂಗತಿಗಳಿಗೆ ಭಾರೀ ಬೆಲೆ ತೆರಬಲ್ಲ! ಈ ವೈರುಧ್ಯದ ಎಳೆಗಳನ್ನು ಇಲ್ಲಿನ ಕಥೆಗಳಲ್ಲಿ ಸಾಕಷ್ಟು ದುಡಿಸಿಕೊಂಡ ಲೇಖಕಿ ಅವುಗಳಿಗೆ ಜೀವತುಂಬಿ ಅರ್ಥೈಸಿದ್ದಾರೆ.
ಹೊಸತು- 2003-ಜನವರಿ
ಕಥಾವಸ್ತುಗಳು ನಡೆಯುತ್ತಲೇ ಇರುವ ಸತ್ಯ ಸಂಗತಿಗಳು ಎನ್ನಲಡ್ಡಿಯಿಲ್ಲ. ನಮ್ಮೆಲ್ಲರ ಬಾಳಿನಲ್ಲಿ ನಿರಂತರವಾಗಿ ಎದುರಾಗುತ್ತ ದಾಟಿ ಮುಂದೆ ಹೋಗುತ್ತ - ಮತ್ತೆ ಮತ್ತೆ ಎದುರಾಗುವ ವರ್ತುಲ ಸ್ವರೂಪದ ವಿಷಯಗಳು. ಬಹಳಷ್ಟು ಗಂಭೀರ ವಿಷಯಗಳಿಗೆ ಚಿಕ್ಕಾಸಿನ ಬೆಲೆಯೂ ಕೊಡಲಾರದ ಮಾನವ ಅತಿ ಚಿಕ್ಕ ಚಿಕ್ಕ ಸಂಗತಿಗಳಿಗೆ ಭಾರೀ ಬೆಲೆ ತೆರಬಲ್ಲ! ಈ ವೈರುಧ್ಯದ ಎಳೆಗಳನ್ನು ಇಲ್ಲಿನ ಕಥೆಗಳಲ್ಲಿ ಸಾಕಷ್ಟು ದುಡಿಸಿಕೊಂಡ ಲೇಖಕಿ ಅವುಗಳಿಗೆ ಜೀವತುಂಬಿ ಅರ್ಥೈಸಿದ್ದಾರೆ.
©2024 Book Brahma Private Limited.