ಹಿರಿಯ ಸಾಹಿತಿ ಡಾ. ಎಸ್.,ವಿ. ರಂಗಣ್ಣ ಅವರು ಗ್ರೀಕ್ ಭಾಷೆಯ ಆರು ನಾಟಕಗಳನ್ನು ಕನ್ನಡಕ್ಕೆ ಭಾಷಾಂತರಿಸಿದ ಕೃತಿ ಇದು. ಗ್ರೀಕ್ ನ ಬಹುತೇಕ ನಾಟಕಗಳು ಪುರಾಣದ ಕಥಾವಸ್ತುವನ್ನು ಹೊಂದಿವೆ. ದೇವರುಗಳ ಮತ್ತು ವೀರರ, ವಿಶ್ವ ಪ್ರಕೃತಿ ಮತ್ತು ಅದರ ಮೂಲ ಹಾಗೂ ವಿಧಿ ಮತ್ತು ಮತಾಚರಣೆ ರೂಢಿಗಳಿಗೆ ಸಂಬಂಧಿಸಿದವು. ಆದರೆ, ಅವು ಸಾಮಾಜಿಕ ಹೊಣೆಗಾರಿಕೆಯನ್ನೂ ಪ್ರದರ್ಶಿಸಿವೆ. ಆದ್ದರಿಂದ, ಕವಿಗಳು ಮತ್ತು ಕಲಾವಿದರು ಪುರಾತನ ಕಾಲದಿಂದ ಈಗಿನವರೆಗೂ ಈ ಗ್ರೀಕ್ ಪುರಾಣ ಕಥೆಗಳಿಂದ ಸ್ಫೂರ್ತಿ ಪಡೆಯುತ್ತಲ್ಲೇ ಇದ್ದಾರೆ
©2024 Book Brahma Private Limited.