19ನೇ ಶತಮಾನದ ಪ್ರಮುಖ ಭಾರತೀಯ ಸಂಸ್ಕೃತಿ ಚಿಂತಕರಲ್ಲಿ ಪಂಡಿತ ಧರ್ಮಾನಂದ ಕೊಸಾಂಬಿ ಒಬ್ಬರು. ಅವರು ರಚಿಸಿದ ನಾಟಕ ‘ಬೋಧಿಸತ್ವ’. ಈ ಕೃತಿಯನ್ನು ಗೀತಾ ಶೆಣೈ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯಲ್ಲಿ ಶಾಕ್ಯ ಕುಲದಲ್ಲಿ ಹುಟ್ಟಿದ ಗೌತಮನು ಬುದ್ಧನಾಗುವವರೆಗಿನ ಕಥೆ ಇದೆ. ಗೌತಮನು ರಾಜಕುವರನಾಗಿದ್ದು ಅವನಲ್ಲಿ ವೈರಾಗ್ಯ ಮೂಡಲು ಕೆಲವು ನಿರ್ದಿಷ್ಟ ಪ್ರಸಂಗಗಳು ಕಾರಣವಾಗಿದ್ದವು ಎಂಬ ಪ್ರಚಲಿತ ಕಥೆಗೆ ಭಿನ್ನವಾಗಿ ಧರ್ಮಾನಂದರು ಇಲ್ಲಿ ರಾಜಕೀಯ ಬಿಕ್ಕಟ್ಟಿನ ಮೂಲಕ ಗೌತಮನು ಜಗಕಲ್ಯಾಣದ ಪರಿಕಲ್ಪನೆಯನ್ನು ಅಳವಡಿಸಿಕೊಂಡು ಧಾರ್ಮಿಕ ಭಿಕ್ಷಾರ್ಥಿಯಾಗಿ ಸಂಬೋಧಿಯನ್ನು ಪಡೆದ ಕತೆಯನ್ನು ವಿವರಿಸಿದ್ದಾರೆ.
ಕೊಸಾಂಬಿ ಅವರು ತಮ್ಮ ಈ ನಾಟಕದಲ್ಲಿ ಅಳವಡಿಸಿಕೊಳ್ಳಲಾದ ಕಥೆಗೆ ಪ್ರಾಚೀನ ಗ್ರಂಥಗಳ ಆಧಾರವನ್ನು ಉಲ್ಲೇಖಿಸಿದ್ದಾರೆ.
ಶ್ರೀಪಾದ್ ಭಟ್ ಅವರಿಂದ ಧರ್ಮಾನಂದ ಕೋಸಂಬಿಯವರ ‘ಬೋಧಿಸತ್ವ’ ನಾಟಕದ ಒಂದು ಪ್ರಸಂಗ
©2025 Book Brahma Private Limited.