ಕೋರಿಯೋಲೇನಸ್ ಮತ್ತು ಲಿಯರ್ ಲಹರಿ

Author : ಕೆ.ವಿ. ಅಕ್ಷರ

Pages 152

₹ 170.00




Year of Publication: 2021
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಸರ ಪೋಸ್ಟ್, ಸಾಗರ ತಾಲೂಕು, ಶಿವಮೊಗ್ಗ ಜಿಲ್ಲೆ. - 577417,
Phone: 094802 80401

Synopsys

ಲೇಖಕ ಅಕ್ಷರ ಕೆ.ವಿ ಅವರ ‘ಕೋರಿಯೋಲೇನಸ್ ಮತ್ತು ಲಿಯರ್ ಲಹರಿ’ ಎಂಬ ನಾಟಕ ಕೃತಿಯು ಶೇಕ್ಸ್​ಪಿಯರ್​ನ ಎರಡು ನಾಟಕಗಳ ಅನುವಾದಿತ ಸಂಕಲನ ರೂಪವಾಗಿದೆ. ಈ ಸಂಕಲನದಲ್ಲಿ ಸೇರಿರುವ ಮೊದಲನೆಯ ನಾಟಕವು ಶೇಕ್ಸ್ ಪಿಯರ್ ಪ್ರಾಯಶಃ 1608-09ರ ಕಾಲದಲ್ಲಿ ರಚಿಸಿದ ‘ದಿ ಟ್ರಾಜೆಡಿ ಅಫ್ ಕೋರಿಯೋಲೇನಸ್’ ಇದರ ಅನುವಾದವನ್ನು ಮಾಡಿದ ತಕ್ಷಣವೇ ಮಿತ್ರ ವೆಂಕಟರಮಣ ಐತಾಳರು ಇದನ್ನು ಪ್ರಯೋಗಿಸಬಹುದೆಂಬ ಸೂಚಿಸಿದ್ದು, ನೀನಾಸಂ ರಂಗಶಿಕ್ಷಣ ಕೇಂದ್ರದಲ್ಲಿ ಅಧ್ಯಾಪಕರಾಗಿದ್ದ ಎಚ್.ಕೆ. ಶ್ವೇತಾರಾಣಿ ಅವರು ಈ ನಾಟಕವನ್ನು ಪ್ರಯೋಗಿಸಲು ಸಿದ್ಧತೆ ಮಾಡಿಕೊಂಡರು. ಆದರೆ, ಕೊರೊನಾ ಕಾರಣದಿಂದ ಯಾವುದಕ್ಕೂ ಅವಕಾಶ ಸಿಗದಿದ್ದರಿಂದ ಮುಂದೆ ನಾನೂ ಸೇರಿದಂತೆ ಯಾರಿಗಾದರೂ ಇದನ್ನು ಪ್ರಯೋಗಿಸುವ ಆಸಕ್ತಿ ಹುಟ್ಟಿದರೆ ಈ ಪಠ್ಯ ಲಭ್ಯವಿರಲಿ ಎಂಬ ಆಶಯದೊಡನೆ ಇದನ್ನು ಪ್ರಕಟಿಸುತ್ತಿದ್ದೇನೆ ಎಂಬುದಾಗಿ ಲೇಖಕ ಅಕ್ಷರ ಕೆ.ವಿ ಹೇಳಿದ್ದಾರೆ.

ಶೇಕ್‍ಸ್ಪಿಯರ್ ಕೃತಿಗಳೆಂದರೆ ಅವು ಆತನ ಮೂಲೋದ್ದಿಶ್ಯಗಳ ಸಿದ್ಧ-ನಿಶ್ಚಿತ ಪ್ರತಿಬಿಂಬಗಳೋ ಎನ್ನುವ ಹಾಗೆ ನಾವು ಮಾತಾಡುವುದಿದೆ. ಆದರೆ ಅವು ಇವತ್ತಿಗೂ ಜೀವಂತವಾಗಿ ಉಳಿದುಕೊಂಡಿರುವುದು ಸಂಪೂರ್ಣ ರೂಪ ಬದಲಾಯಿಸಿಕೊಳ್ಳಬಲ್ಲ ತಮ್ಮ ವಿಶಿಷ್ಟ ಶಕ್ತಿಯಿಂದಾಗಿಯೇ. ಆತನ ಕೃತಿಗಳೀಗ ಶೇಕ್ಸ್ ಪಿಯರ್ ಲೋಕದಿಂದ ಹೊರಬಂದು ನಮ್ಮ ಲೋಕದೊಳಕ್ಕೆ ಪ್ರವೇಶಿಸಿ ನಮ್ಮವೇ ಆಗಿಹೋಗಿವೆ. ನಾವು ನಿರ್ಗಮಿಸಿದ ಮೇಲೂ - ಪ್ರಾಯಶಃ ನಮ್ಮ ಬಾಳ್ವೆ ಮತ್ತು ಹಣೆಬರಹಗಳ ಸೊಗಡನ್ನೂ ತುಸು ಸೇರಿಸಿಕೊಂಡು - ಅವು ಉಳಿಯಲಿಕ್ಕಿವೆ; ಅನೂಹ್ಯ ಮತ್ತು ಕಲ್ಪನಾತೀತ ರೀತಿಗಳಲ್ಲಿ ಮುಂದಿನವರ ಬದುಕುಗಳ ಭಾಗವೂ ಆಗಲಿಕ್ಕಿವೆ ಎಂಬುದು ಅಮೆರಿಕಾದ ಸಾಹಿತ್ಯ ಇತಿಹಾಸಕಾರ ಸ್ಟೀಫನ್ ಗ್ರೀನ್ ಬ್ಲಾಟ್ ಮಾತುಗಳು’ ಎಂದು ಅನುವಾದಕರು ಹೇಳಿದ್ದಾರೆ. 

About the Author

ಕೆ.ವಿ. ಅಕ್ಷರ

ಇಂಗ್ಲೆಂಡಿನ ಲೀಡ್ಸ್ ವಿಶ್ವವಿದ್ಯಾಲಯದಿಂದ ರಂಗಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕೆ.ವಿ. ಅಕ್ಷರ ಅವರು ಹೆಗ್ಗೋಡಿನ ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ಅಧ್ಯಾಪಕ. ಖ್ಯಾತ ರಂಗ ನಿರ್ದೇಶಕರಾಗಿರುವ ಅವರು ಸೃಜನಶೀಲ ಸಾಹಿತಿ, ನಾಟಕ, ಕವನ, ಪ್ರಬಂಧಗಳನ್ನು ರಚಿಸಿದ್ದಾರೆ.  ಸಹ್ಯಾದ್ರಿಕಾಂಡ, ಚೂರಿಕಟ್ಟೆ (ನಾಟಕಗಳು), ಹದಿಹರೆಯದ ಹಾಡುಗಳು (ಕವನ ಸಂಕಲನ), ರಂಗಪ್ರಪಂಚ, ರಂಗಪ್ರಯೋಗ, ರಂಗ ಅನ್ವೇಷಣೆ, ರಂಗಭೂಮಿ- ಪೂರ್ವ ಪಶ್ಚಿಮ (ರಂಗಕೃತಿ), ಮಾವಿನ ಮರದಲ್ಲಿ ಬಾಳೆಹಣ್ಣು (ವಿಮರ್ಶೆ). ಕರ್ನಾಟಕ ನಾಟಕ ಅಕಾಡೆಮಿಯ ಫೆಲೋಶಿಪ್ (2000) ಲಭಿಸಿದೆ. ...

READ MORE

Related Books