ಶಕ್ತಿಭದ್ರನ”ಆಶ್ಚರ್ಯ ಚೂಡಾಮಣಿ’ ಮೊಟ್ಟಮೊದಲು ಗಮನ ಸೆಳದಿದ್ದು-1926ರಲ್ಲಿ. ಕೇರಳದಲ್ಲಿ ದೊರೆತ ತಾಳೆಯೋಲೆಗಳ ಸಹಾಯದಿಂದ ಮದ್ರಾಸಿನ ಬಾಲ ಮನೋರಮಾದವರು ಮೊದಲು ಇದನ್ನು ಪ್ರಕಟಿಸಿದರು. ಮೂಲಕವಿ ಶಕ್ತಿಭದ್ರ ಈತನ ಕಾಲ 16ನೇ ಶಮಾನ ಎಂದು ಹೇಳಲಾಗಿದೆ. ಆಶ್ಚರ್ಯ ಚೂಡಾಮಣಿಗೆ ರಾಮಾಯಣದ ಕಥೆಯೇ ಮೂಲ. ಬಾಲಕಾಂಡವೊಂದನ್ನು ಹೊರತುಪಡಿಸಿ ಉಳಿದ ಎಲ್ಲ ಅಂದರೆ ಅರಣ್ಯಕಾಂಡ, ಅಯೋಧ್ಯೆ ಕಾಂಡ ಸೇರಿದಂತೆ ಎಲ್ಗವೂ ಈ ನಾಟಕದಲ್ಲಿ ಅಡಕವಾಗಿವೆ.
ಮಾನವ ಸ್ವಭಾವದ ಆಳಗಳನ್ನು ಸಹ ಶಕ್ತಿಭದ್ರನು ಕಲೆ ಬರೆಹದ ಮೂಲಕ ಕಾಣಿಸಿದ್ದಾನೆ. ಭಾಸನ ಸಂಸ್ಕೃತ ನಾಟಕಗಳನ್ನೂ ಸಹ ಕನ್ನಡಕ್ಕೆ ಅನುವಾದಿಸಿರುವ ಡಾ. ಕೆ. ಕೃಷ್ಣಮೂರ್ತಿ ಅವರು ಶಕ್ತಿಭದ್ರನ ಆಶ್ಚರ್ಯ ಚೂಡಾಮಣಿಯೂ ಕನ್ನಡಕ್ಕೆ ತಂದಿದ್ದಾರೆ.
ಪುಸ್ತಕದ ಆರಂಭದಲ್ಲಿ ಶಕ್ತಿಭದ್ರನ ಕಾಲ-ದೇಶ-ನಾಟಕಗಳು, ಕೃತಿಗಳ ರಸ-ರಸಾಭಾವ ಇತ್ಯಾದಿಗಳ ಬಗ್ಗೆ ಸವಿಸ್ತಾರವಾದ ಪರಿಚಯವಿದ್ದರಿಂದ ಕೃತಿಯನ್ನು ಅರ್ಥಮಾಡಿಕೊಳ್ಳಲು ಅನುಕೂಲವಾಗಿದೆ. ಕನ್ನಡದ ಆಶ್ಚರ್ಯ ಚೂಡಾಮಣಿಯು 1959ರಲ್ಲಿ ಮೊದಲ ಮುದ್ರಣ ಕಂಡಿತ್ತು.
©2025 Book Brahma Private Limited.